ಮಂಗಳೂರಿನಲ್ಲಿ ಮಾಜಿ ಯೋಧನ ಖತರ್ನಾಕ್ ಸ್ಕೆಚ್; ತಾನು ಕಾರ್ಯದರ್ಶಿಯಾಗಿರುವ ಅಪಾರ್ಟ್ಮೆಂಟ್ ನಲ್ಲೆ 51 ಲಕ್ಷ ದೋಚಿದ! (VIDEO)
Tuesday, September 22, 2020
(ಗಲ್ಫ್ ಕನ್ನಡಿಗ)ಮಂಗಳೂರು; ಮಾಜಿ ಯೋಧನೊಬ್ಬ ಮಂಗಳೂರಿನ ಸುರತ್ಕಲ್ ನ ಇಡ್ಯಾದಲ್ಲಿ ತನ್ನ ಖತರ್ನಾಕ್ ಬುದ್ದಿ ತೋರಿಸಿ ಜೈಲುಪಾಲಾಗಿದ್ದಾನೆ.
(ಗಲ್ಫ್ ಕನ್ನಡಿಗ)ನವೀನ್ ಎಂಬ ಮಾಜಿ ಯೋಧ ಸೈನಿಕ ವೃತ್ತಿಗೆ ನಿವೃತ್ತಿ ಪಡೆದು ವೈನ್ ಶಾಪ್ ವೊಂದರಲ್ಲಿ ಮೆನೆಜರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಇಡ್ಯಾ ಗ್ರಾಮದಲ್ಲಿ ಜಾರ್ಡಿನ್ ಅಪಾರ್ಟ್ಮೆಂಟ್ ನಲ್ಲಿ ಪ್ಲ್ಯಾಟ್ ಹೊಂದಿದ್ದಾನೆ. ಈತನನ್ನು ಅಪಾರ್ಟ್‌ಮೆಂಟ್ ನ ಕಾರ್ಯದರ್ಶಿಯಾಗಿಯು ಅಪಾರ್ಟ್ ಮೆಂಟ್ ಜನರು ಆಯ್ಕೆಯು ಮಾಡಿದ್ದರು.
(ಗಲ್ಫ್ ಕನ್ನಡಿಗ)ಈತ ಕಾರ್ಯದರ್ಶಿಯಾಗಿರುವ ಅಪಾರ್ಟ ಮೆಂಟ್ ನಲ್ಲಿ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಪ್ಲ್ಯಾಟ್ ಖರೀದಿಸಿದ್ದರು. ಎರಡು ತಿಂಗಳ ಹಿಂದೆಯಷ್ಟೆ ಅವರು ಸಾವನ್ನಪ್ಪಿದ್ದರು. ಅವರಿಗೆ ಇನ್ನೊಂದು ಮನೆಯಿದ್ದ ಕಾರಣ ಅವರ ಪತ್ನಿ ವಿದ್ಯಾಪ್ರಭು ಆ ಮನೆಯಲ್ಲಿ ವಾಸವಾಗಿದ್ದರು. ಇಡ್ಯಾ ದಲ್ಲಿರುವ ಈ ಪ್ಲ್ಯಾಟ್ ನತ್ತ ಸುಳಿದಿರಲಿಲ್ಲ.
(ಗಲ್ಫ್ ಕನ್ನಡಿಗ)ಈ ಪ್ಲ್ಯಾಟ್ ಮೇಲೆ ಕಣ್ಣು ಹಾಕಿದ ನವೀನ್ ಈ ಪ್ಲ್ಯಾಟ್ ನಲ್ಲಿ ಲೂಟಿ ಮಾಡಲು ಸ್ಕೆಚ್ ಹಾಕಿದ್ದಾನೆ. ಅದಕ್ಕಾಗಿ ತಾನು ಮೆನೆಜರ್ ಆಗಿ ಕೆಲಸ ಮಾಡುತ್ತಿರುವ ವೈನ್ ಶಾಪ್ ನ ವೈಟರ್ ಬೆಳ್ತಂಗಡಿಯ ಸಂತೋಷ್ ನನ್ನು ಜೊತೆಗೆ ಸೇರಿಸಿಕೊಂಡಿದ್ದ. ಅಷ್ಟು ಮಾತ್ರವಲ್ಲದೆ ದುಡ್ಡು ಕೊಟ್ಟು ಕೇರಳದ ರಘು ಮತ್ತು ಅಮೇಶ್ ನನ್ನು ಜೊತೆಗೆ ಸೇರಿಸಿಕೊಂಡಿದ್ದ.
(ಗಲ್ಫ್ ಕನ್ನಡಿಗ)ಆಗಷ್ಟ್ 17 ರಂದು ಇವರೆಲ್ಲ ಒಟ್ಟು ಸೇರಿ ಬಾಲ್ಕನಿ ಮೂಲಕ ಪ್ಲ್ಯಾಟ್ ಪ್ರವೇಶಿಸಿ ಪ್ಲ್ಯಾಟ್ ನಲ್ಲಿ ಕಳವು ಮಾಡಿದ್ದಾರೆ. ಇವರಿಗೆ ಈ ಪ್ಲ್ಯಾಟ್ ನಲ್ಲಿ 51 ಲಕ್ಷ ನಗದು ಮತ್ತು 250 ಗ್ರಾಂ ಚಿನ್ನ ಸಿಕ್ಕಿತ್ತು. ಅದರಲ್ಲಿ ಮಜಾ ಮಾಡುತ್ತಿದ್ದರು.
(ಗಲ್ಫ್ ಕನ್ನಡಿಗ)ಸುಮಾರು ಒಂದು ತಿಂಗಳು ಕಳೆದು ಸೆಪ್ಟೆಂಬರ್ 15 ರಂದು ವಿದ್ಯಾಪ್ರಭು ಅವರು ಈ ಪ್ಲ್ಯಾಟಿಗೆ ಬಂದಾಗ ಕಳವು ನಡೆದದ್ದು ತಿಳಿದುಬಂದಿದೆ. ಈ ಬಗ್ಗೆ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಸಿಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಕಳ್ಳರ ಬೆನ್ನತ್ತಿದ ಪೊಲೀಸರು ಮಾಜಿ ಯೋಧ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 3085710 ರೂ ನಗದು, 224 ಗ್ರಾಂ ಚಿನ್ನ ಮತ್ತು ಕೃತ್ಯಕ್ಯ ಬಳಸಲಾದ ಬೈಕ್ ಮತ್ತು ಕಾರು ವಶಪಡಿಸಿಕೊಳ್ಳಲಾಗಿದೆ.
(ಗಲ್ಫ್ ಕನ್ನಡಿಗ)