ಬಾಲಿವುಡ್ ನಟ ಕಿಶೋರ್ ಶೆಟ್ಟಿ ಲಿಂಕ್ ಬಗ್ಗೆ ಮಾಧ್ಯಮದ ಸುದ್ದಿಯು ಪರಿಶೀಲನೆ; ಪೊಲೀಸ್ ‌ಕಮೀಷನರ್
(ಗಲ್ಫ್ ಕನ್ನಡಿಗ)ಮಂಗಳೂರು;  ಡ್ರಗ್ ಪ್ರಕರಣದಲ್ಲಿ ಬಂಧಿತನಾಗಿರುವ ಕಿಶೋರ್ ಶೆಟ್ಟಿ ಲಿಂಕ್ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸೇರಿದಂತೆ  ಎಲ್ಲಾ ಮೂಲಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮಂಗಳೂರು ಪೊಲೀಸ್ ‌ಕಮೀಷನರ್ ತಿಳಿಸಿದ್ದಾರೆ.

(ಗಲ್ಫ್ ಕನ್ನಡಿಗ)ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಿಶೋರ್ ಶೆಟ್ಟಿ ಲಿಂಕ್ ಬಗ್ಗೆ ನಾನು ಮಾಧ್ಯಮದ ಮೂಲಕ ಹಲವು ಸುದ್ದಿಗಳನ್ನು ನೋಡಿದ್ದೇನೆ. ಈ ಸುದ್ದಿಯನ್ನು  ನಮ್ಮ ತನಿಖೆಗೆ ಮೂಲವೆಂದು ಪರಿಗಣಿಸಿ ಪರಿಶೀಲಿಸುತ್ತೇವೆ. ಕಿಶೋರ್ ಶೆಟ್ಟಿ ಲಿಂಕ್ ಬಗ್ಗೆ ಎಲ್ಲಾ ರೀತಿಯ ತನಿಖೆ ನಡೆಸಲಾಗುವುದು ಎಂದರು.


(ಗಲ್ಫ್ ಕನ್ನಡಿಗ)ಆತನಿಗೆ ಕೊರೊನಾ ನೆಗೆಟಿವ್ ಬಂದಿದ್ದು ಪೊಲೀಸ್ ‌ಕಸ್ಟಡಿಯಲ್ಲಿದ್ದಾನೆ. ಮೂರು ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ ಎಂದರು.


(ಗಲ್ಫ್ ಕನ್ನಡಿಗ)