
ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಜೊತೆಗೆ ನಶೆಯೇರಿಸುತ್ತಿದ್ದ 28 ವರ್ಷದ ಯುವತಿ ಪೊಲೀಸ್ ಬಲೆಗೆ; ವಿಚಾರಣೆಗೆ ಅಡ್ಡಿಯಾಗುತ್ತಿದೆ ನಶೆ ಪ್ರಭಾವ
Tuesday, September 22, 2020
(ಗಲ್ಫ್ ಕನ್ನಡಿಗ)ಮಂಗಳೂರು; ಡ್ರಗ್ಸ್ ಸೇವಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಹಿಂದಿ ಸಿನಿಮಾ ಎಬಿಸಿಡಿ ಯ ನಟ, ಖ್ಯಾತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಯ ಗೆಳತಿಯು ಪೊಲೀಸ್ ಬಲೆಗೆ ಬಿದ್ದಿದ್ದಾಳೆ.
(ಗಲ್ಫ್ ಕನ್ನಡಿಗ)ಮಣಿಪುರದ ಅಸ್ಕಾ (28) ಎಂಬಾಕೆ ಪೊಲೀಸ್ ಬಲೆಗೆ ಬಿದ್ದವಳು. ಈಕೆ ಮತ್ತು ಇನ್ನೊಬ್ಬಳನ್ನು ಕಿಶೋರ್ ಶೆಟ್ಟಿ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಇದರಲ್ಲಿ ಅಸ್ಕಾ ಡ್ರಗ್ಸ್ ತೆಗೆದುಕೊಂಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ.
ನಶೆಯಲ್ಲಿರುವ ಅಸ್ಕಾ!
(ಗಲ್ಫ್ ಕನ್ನಡಿಗ)ಅಸ್ಕಾಳನ್ನು ಡ್ರಗ್ಸ್ ಸೇವನೆಯ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾಗ ಆಕೆ ನಶೆಯಲ್ಲಿದ್ದಳು. ಪೊಲೀಸರು ಆಕೆಯನ್ನು ನಶೆಯಲ್ಲಿದ್ದ ಕಾರಣ ನಿನ್ನೆ ವಿಚಾರಿಸಲು ಸಾಧ್ಯವಾಗಿಲ್ಲ. ಆಕೆ ನಿನ್ನೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಇಂದು ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ಓದಿ; ಡ್ರಗ್ ಕೇಸಲ್ಲಿ ಬಂಧಿತನಾದ ಖ್ಯಾತ ಬಾಲಿವುಡ್ ನಟನ ಬಂಗಲೆ ಹೇಗಿದೆ ಗೊತ್ತಾ? ಇದನ್ನು ನೋಡಿ ನಿಮಗೂ ಶಾಕ್ ಆಗುತ್ತೆ!
(ಗಲ್ಫ್ ಕನ್ನಡಿಗ)