ಲಾಕ್ಡೌನ್ ಬಳಿಕ ವೇಶ್ಯಾವಾಟಿಕೆ ಪುನರಾರಂಭ; ರೆಡ್ಲೈಟ್ ಏರಿಯಾದಲ್ಲಿನ್ನು ಸ್ನಾನ ಮಾಡಿದರೆ ಮಾತ್ರ ಅದು...!
Sunday, September 13, 2020
(ಗಲ್ಫ್ ಕನ್ನಡಿಗ)ಎಲ್ಲಾ ವೇಶ್ಯಾಗೃಹಗಳ ಹೊರಗೆ ದೇಹದ ಉಷ್ಣತೆ ಪರೀಕ್ಷಿಸುವ ಉಪಕರಣ, ಸ್ಯಾನಿಟೈಸರ್ ಇರಿಸಲಾಗಿದೆ. ಹೀಗೆ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ ಬುಧವಾರ್ ಪೇಟೆಯಲ್ಲಿರುವ ರೆಡ್ ಲೈಟ್ ಪ್ರದೇಶದಲ್ಲಿ ವೇಶ್ಯಾವಾಟಿಕೆ ಪುನರಾರಂಭಗೊಂಡಿದೆ.
(ಗಲ್ಫ್ ಕನ್ನಡಿಗ)ಕಳೆದ ಐದು- ಆರು ತಿಂಗಳುಗಳಿಂದ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಈ ಕಣ್ಣಿಗೆ ಕಾಣದ ವೈರಸ್ಗೆ ಬೆಚ್ಚಿ ಬಿದ್ದಿದೆ. ಹೀಗಿರುವಾಗ ಇದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಅನೇಕ ದೇಶಗಳು ಲಾಕ್‌ಡೌನ್ ಹೇರಿದ್ದವು. ಸದ್ಯ ಈ ಲಾಕ್‌ಡೌನ್ ನಿಧಾನವಾಗಿ ತೆರವಾಗುತ್ತಿದೆ. ಭಾರತದಲ್ಲೂ ಲಾಕ್‌ಡೌನ್ ಸಡಿಲಿಸುತ್ತಿದ್ದಂತೆಯೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ಆದರೆ, ಇವೆಲ್ಲರದ ನಡುವೆ ಪುಣೆಯಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ರೆಡ್ಲೈಟ್ ಏರಿಯಾ ತೆರೆಯಲಾಗಿದೆ. ಕೊರೋನಾ ಪ್ರಕರಣಗಳು ದಾಖಲಾಗದ ಹಿನ್ನೆಲೆ ಈ ಅನುಮತಿ ನೀಡಲಾಗಿದೆ. ಹೀಗಾಗೇ ವಿಭಿನ್ನ ರಾಜ್ಯಗಳಲ್ಲಿರುವ ರೆಡ್ ಲೈಟ್ ಏರಿಯಾ ವರ್ಕರ್ಸ್ ಸದ್ಯ ಪುಣೆ ಕಡೆ ಮುಖ ಮಾಡಿದ್ದಾರೆ.
(ಗಲ್ಫ್ ಕನ್ನಡಿಗ)ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ವೇಶ್ಯಾವಾಟಿಕೆ ಶುರುವಾಗಿದ್ದು, ಸ್ನಾನ, ಮಾಸ್ಕ್, ಗ್ಲೌಸ್ ಕಡ್ಡಾಯ ಎಂದು ಹೇಳಿ ಅನೇಕ ಸೂತ್ರ ಸಿದ್ಧಪಡಿಸಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪುಣೆಯ ವೇಶ್ಯಾವಾಟಿಕೆ ಕೇಂದ್ರಗಳು ಆರಂಭವಾಗಿವೆ. ಪುಣೆಯ ಬುಧವಾರ್ ಪೇಟೆಯಲ್ಲಿನ ರೆಡ್ ಲೈಟ್ ಪ್ರದೇಶದಲ್ಲಿ ಸುಮಾರು 3000ಕ್ಕೂ ಅಧಿಕ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿದ್ದು ತಮ್ಮ ವೃತ್ತಿಯನ್ನು ಆರಂಭಿಸಿದ್ದಾರೆ.
(ಗಲ್ಫ್ ಕನ್ನಡಿಗ)ಸಹೇಲಿ ಎನ್.ಜಿ.ಓ. ಸಂಘಟನೆಯ ನೆರವಿನಿಂದ ವೇಶ್ಯಾವಾಟಿಕೆ ವೃತ್ತಿ ಪುನರಾರಂಭಿಸಿದ್ದು, ನಿಯಮದಡಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಸೂಚಿಸಿದ್ದಾರೆ. ಪ್ರಮುಖವಾಗಿ ಗಿರಾಕಿಗಳು ವೇಶ್ಯಾಗೃಹ ಪ್ರವೇಶಿಸಿದ ಕೂಡಲೇ ಸ್ನಾನ ಮಾಡಬೇಕು. ರೂಮ್ ಪ್ರವೇಶಿಸುವ ಮುನ್ನ ಮುಖಕ್ಕೆ ಮಾಸ್ಕ್ ಮತ್ತು ಕೈಗೆ ಗ್ಲೌಸ್ ಧರಿಸುವುದು ಕಡ್ಡಾಯ. ವೃತ್ತಿನಿರತ ಮಹಿಳೆಯರು ಕೂಡ ಮಾಸ್ಕ್ ಮತ್ತು ಗ್ಲೌಸ್ ಧರಿಸಿ ಕಾಂಡೋಮ್ ಕಡ್ಡಾಯವಾಗಿ ಬಳಸಿ ಲೈಂಗಿಕ ಕ್ರಿಯೆ ನಡೆಸಬೇಕು.
(ಗಲ್ಫ್ ಕನ್ನಡಿಗ)ಎಲ್ಲಾ ವೇಶ್ಯಾಗೃಹಗಳ ಹೊರಗೆ ದೇಹದ ಉಷ್ಣತೆ ಪರೀಕ್ಷಿಸುವ ಉಪಕರಣ, ಸ್ಯಾನಿಟೈಸರ್ ಇರಿಸಲಾಗಿದೆ. ಹೀಗೆ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ ಬುಧವಾರ್ ಪೇಟೆಯಲ್ಲಿರುವ ರೆಡ್ ಲೈಟ್ ಪ್ರದೇಶದಲ್ಲಿ ವೇಶ್ಯಾವಾಟಿಕೆ ಪುನರಾರಂಭಗೊಂಡಿದೆ.
(ಗಲ್ಫ್ ಕನ್ನಡಿಗ)ಕೊರೋನಾ ಸಂಕಟದ ನಡುವೆ ರೆಡ್ ಲೈಟ್ ಏರಿಯಾ ವರ್ಕರ್ಸ್ ತಮ್ಮ ಗ್ರಾಹಕರಿಗೆ ಫೋನ್ ಮೂಲಕವೂ ಸರ್ವಿಸ್ ಕೊಡಲಾರಂಭಿಸಿದ್ದಾರೆ. ಬುಧವಾರ್ ಪೇಟ್‌ನ ಮುಖ್ಯಸ್ಥೆ ಈ ಸಂಬಂಧ ಪ್ರತಿಕ್ರಿಯಿಸಿ, ವಿಡಿಯೋ ಕಾಲ್ ಮೂಲಕ ಗ್ರಾಹಕರಿಗೆ ಹುಡುಗಿಯರನ್ನು ಪರಿಚಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
(ಗಲ್ಫ್ ಕನ್ನಡಿಗ)ಇದರಿಂದ ಸಾಮಾಜಿಕ ಅಂತರ ಪಾಲನೆಯಾಗುವುದರೊಂದಿಗೆ ವರ್ಕರ್ಸ್‌ಗಳಿಗೆ ದುಡಿಮೆಯೂ ಸಿಗುತ್ತದೆ. ಇನ್ನು ಪರಿಸ್ಥಿತಿ ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಹೊಸ ಆಯ್ಕೆ ನೋಡಿಕೊಳ್ಳಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.
(ಗಲ್ಫ್ ಕನ್ನಡಿಗ)