ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸೌತ್ ಆಫ್ರಿಕಾ ಸಸ್ಪೆಂಡ್: ಸರ್ಕಾರದ ಹಿಡಿತದಲ್ಲಿ ಕ್ರಿಕೆಟ್      (ಗಲ್ಫ್ ಕನ್ನಡಿಗ)ವಿಶ್ವದ ಬಲಾಢ್ಯ ತಂಡಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾ ಆತಂಕದ ಕ್ಷಣಗಳನ್ನು ಎದುರಿಸುತ್ತಿದೆ. ಅಲ್ಲಿನ ದೇಶದ ಸರ್ಕಾರ ತನ್ನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಸಸ್ಪೆಂಡ್ ಮಾಡಿದ್ದು, ಕ್ರಿಕೆಟ್ ಮಂಡಳಿಯ ಮೇಲೆ ಹಿಡಿತ ಸಾಧಿಸಿದೆ.      (ಗಲ್ಫ್ ಕನ್ನಡಿಗ)ದೇಶದ ಎರಡು ಕ್ರೀಡಾ ಸಂಸ್ಥೆಗಳಾದ ದಕ್ಷಿಣ ಆಫ್ರಿಕಾದ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿ (ಎಸ್‌ಎಎಸ್‌ಒಸಿ) ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಮಂಡಳಿಯನ್ನು ಒಂದು ತಿಂಗಳ ಅವಧಿಗೆ ಅಮಾನತುಗೊಳಿಸಿದೆ. ಈ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಎಸ್‌ಎಎಸ್‌ಒಸಿ ತನಿಖೆ ನಡೆಸಲಿದೆ.      (ಗಲ್ಫ್ ಕನ್ನಡಿಗ)ದೇಶದಲ್ಲಿನ ಆಂತರಿಕ ಭ್ರಷ್ಟಾಚಾರ ಪ್ರಕರಣಗಳಿಂದಾಗಿ ಪ್ರಮುಖ ಆಟಗಾರರು ಮೂಲೆಗುಂಪಾಗಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದಾಗಿ ಮಂಡಳಿಗೆ ಮತ್ತಷ್ಟು ಹಿನ್ನಡೆ ಉಂಟು ಮಾಡಿದೆ.      (ಗಲ್ಫ್ ಕನ್ನಡಿಗ)ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಆಡಳಿತಕ್ಕೆ ಸಂಬಂಧಿಸಿ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ, ಕ್ರಿಕೆಟ್ ಮಂಡಳಿಯನ್ನು ತನ್ನ ನಿಯಂತ್ರಣಕ್ಕೆ ಪಡೆದಿದೆ.


      (ಗಲ್ಫ್ ಕನ್ನಡಿಗ)ಆಯಾ ದೇಶದ ಕ್ರಿಕೆಟ್ ಮಂಡಳಿಗಳ ಮೇಲೆ ರಾಜಕೀಯ ಹಿಡಿತ ಹೊಂದಿರುವುದು ಐಸಿಸಿ ನಿಯಮಕ್ಕೆ ವಿರುದ್ಧ. ಈ ಕಾರಣದಿಂದಲೇ ಕಳೆದ ವರ್ಷ ಜಿಂಬಾಬ್ವೆ ತಂಡವನ್ನೂ ಅಮಾನತು ಮಾಡಲಾಗಿತ್ತು. ದಕ್ಷಿಣ ಆಫ್ರಿಕಾ ಕ್ರಿಕೆಟ್ ನ ಈ ವಿದ್ಯಮಾನದ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


      (ಗಲ್ಫ್ ಕನ್ನಡಿಗ)