-->
ads hereindex.jpg
ಉದ್ಯೋಗ ಖಾತ್ರಿ ಯೋಜನೆಯ ಹರಿಕಾರ ಕೊರೋನಾಕ್ಕೆ ಬಲಿ

ಉದ್ಯೋಗ ಖಾತ್ರಿ ಯೋಜನೆಯ ಹರಿಕಾರ ಕೊರೋನಾಕ್ಕೆ ಬಲಿನವದೆಹಲಿ: ನರೇಗಾ ಯೋಜನೆ ಅಥವಾ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ... ಇದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಜಾರಿಯಾದ ಯಶಸ್ವೀ ಯೋಜನೆ. ಈ ಯೋಜನೆಯ ಹರಿಕಾರ ನಮ್ಮನ್ನಗಲಿದ್ದಾರೆ. ಹೌದು, ಅವರೇ ರಘುವಂಶ ಪ್ರಸಾದ್ ಸಿಂಗ್.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಲಾಲೂಪ್ರಸಾದ್ ಯಾದವ್ ನಾಯಕತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ಯ ಪ್ರಮುಖ ನಾಯಕರಾದ ರಘುವಂಶ ಪ್ರಸಾದ್ ಕೇವಲ ಎರಡು ದಿನಗಳ ಹಿಂದಷ್ಟೇ ಪಕ್ಷ ತೊರೆಯುವ ಮಾತಾಡಿದ್ದರು. ಲಾಲೂ ಅವರ ರಾಜಕೀಯ ಜೀವನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಘುವಂಶ ಪ್ರಸಾದ್ ಆರ್‌ಜೆಡಿಯ ಪ್ರಮುಖ ನೀತಿ ನಿರೂಪಕರೂ ಅಗಿದ್ದರು. ಆದರೆ, ಲಾಲು ಜೈಲು ಪಾಲಾದ ಬಳಿಕ ಯುವ ನಾಯಕರ ಜೊತೆ ಅಷ್ಟೊಂದು ತಾಳ ಮೇಳ ಇರಲಿಲ್ಲ.

ರಘುವಂಶ ಪ್ರಸಾದ್ ಬಗ್ಗೆ ಹಿರಿಯ ಪತ್ರಕರ್ತ ರಾಜಾರಾಮ್ ತಲ್ಲೂರು ಹೀಗೆ ಬರೆದಿದ್ದಾರೆ...

UPA ಸರಕಾರದ ಅತ್ಯಂತ ಯಶಸ್ವೀ ಯೋಜನೆಯೂ, ಈಗ ಕೊರೊನಾ ಕಾಲದಲ್ಲಿ ಜನರ ಜೀವಜಲವೂ ಆಗಿರುವ ನಾರೆಗಾ (NREGA)ಯೋಜನೆಯ ಮೂಲ ಶ್ರೀ ರಘುವಂಶ ಪ್ರಸಾದ್ ಸಿಂಗ್ ಅವರು ಕೊರೊನಾಕ್ಕೆ ಜೀವತೆತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

ಸುಮಾರಿಗೆ 90ರ ದಶಕದ ಮಧ್ಯಭಾಗದಿಂದಲೂ ಸಂಸತ್ತಿನಲ್ಲಿ ಬೊಬ್ಬೆ ಪಾರ್ಟಿ ಎಂದೇ ಪ್ರಸಿದ್ಧವಾಗಿದ್ದ ಒಂದಿಷ್ಟು ಮಂದಿಯಲ್ಲಿ ರಘುವಂಶಪ್ರಸಾದ್ ಒಬ್ಬರು. ಸುದ್ದಿಕೋಣೆಗಳಲ್ಲಿ ಸಂಸತ್ತಿನ ಸುದ್ದಿ ಬರೆಯುವಾಗ ಯಾವತ್ತೂ ಸಿಗುತ್ತಿದ್ದ ಹೆಸರು. ಅವರ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವೇನೂ ಇರಲಿಲ್ಲ. ಏಕೆಂದರೆ, ಆ ಅಭಿಪ್ರಾಯವನ್ನು ನಾನು ರೂಢಿಸಿಕೊಂಡದ್ದು ಮಾಧ್ಯಮಗಳ ಮೂಲಕ.

ಆದರೆ ಅಕಸ್ಮಾತ್ ಒಂದು ದಿನ, ಎಲ್ಲೋ ಅವರ ಸುದೀರ್ಘ ಸಂದರ್ಶನವೊಂದನ್ನು ಕೇಳಿದೆ. ಅರೇ ದೇಶದ ನಾಡಿಮಿಡಿತ ಬಲ್ಲ ಮನುಷ್ಯ ಈತ ಅಂತ ಅನ್ನಿಸಿತು. ಸ್ವಲ್ಪ ಕೆದಕಿ ನೋಡಿದರೆ, ಗಣಿತದಲ್ಲಿ PhD ಪದವಿ ಪಡೆದಿರುವ ವ್ಯಕ್ತಿ.

ಅಲ್ಲಿಂದ ನಾನು ಅವರ ಬಗ್ಗೆ ಗಮನ ಇರಿಸಿಕೊಂಡೇ ಬಂದಿದ್ದೆ. ಸಂಸತ್ತಿನಲ್ಲಿ ಅವರ ಮಾತು-ಚರ್ಚೆ, ದೊಡ್ಡ ಗಂಟಲು… ಎಲ್ಲವೂ ದೇಶದ ಜನಸಾಮಾನ್ಯರ ನಾಡಿಮಿಡಿತಗಳೇ. ಬೇಕಿದ್ದರೆ ಕೆದಕಿನೋಡಿ. ಲಾಲೂ ಪ್ರಸಾದ್ ಯಾದವ್ ಅವರ ಥಿಂಕ್ ಟ್ಯಾಂಕ್ ತಂಡದ ಪ್ರಮುಖರೂ ಆಗಿದ್ದ ರಘುವಂಶ್ ಪ್ರಸಾದ್ 2014,2019 ಚುನಾವಣೆಗಳನ್ನು ಸೋತ ಬಳಿಕ ಮತ್ತು ಲಾಲೂ ಜೈಲುಪಾಲಾದ ಬಳಿಕ ಅವರ ಮಗನೊಂದಿಗೆ ಅಂತಹ ಹೊಂದಾಣಿಕೆ ಇಲ್ಲದೆ ಸ್ವಲ್ಪ ಮೂಲೆಪಾಲಾಗಿದ್ದರು.

ಮುಖ ನೋಡಿ ಮಣೆಹಾಕುವ ಭಾರತದ ಮಾಧ್ಯಮಗಳು ಅಲ್ಲದಿದ್ದರೆ, ಪಿ.ಚಿದಂಬರಂ, ಅರುಣ್ ಜೇಟ್ಲೀ ಸಾಲಿನಲ್ಲಿ ನಿಲ್ಲಬೇಕಾಗಿದ್ದ, ನೆಲದಲ್ಲಿ ಬೇರೂರಿ ನಿಂತಿದ್ದ ಜನನಾಯಕ ಅವರು. ಇಂತಹ 2-3ಮಂದಿ ಸಂಸತ್ತಿನಲ್ಲಿದ್ದಿದ್ದರೂ ನಮ್ಮ ದೇಶದ ಪರಿಸ್ಥಿತಿ ಇಷ್ಟು ಕೆಡುತ್ತಿರಲಿಲ್ಲ. ಹೋಗಿಬನ್ನಿ ಸರ್.


Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242