-->

ಎಡನೀರು ಮಠಕ್ಕೆ ನೂತನ ಯತಿ: ಕೇಶವಾನಂದ ಭಾರತೀ ತೀರ್ಥರ ಉತ್ತರಾಧಿಕಾರಿ ಯಾರು ಗೊತ್ತೇ?

ಎಡನೀರು ಮಠಕ್ಕೆ ನೂತನ ಯತಿ: ಕೇಶವಾನಂದ ಭಾರತೀ ತೀರ್ಥರ ಉತ್ತರಾಧಿಕಾರಿ ಯಾರು ಗೊತ್ತೇ?


ಹಸಿರಿನಿಂದ ನಳ ನಳಿಸುವ ,ಸಾಂಸೃತಿಕ ಧಾರ್ಮಿಕ‌ ಮನಗಳನ್ನು ಸೂಜಿಕಲ್ಲಿನಂತೆ ಸೆಳೆಯುವ ಕೇರಳ ಕರ್ನಾಟಕದ ಸಾಂಸೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕೊ೦ಡಿಯಾಗಿರುವ ಸುಂದರ ಸ್ಥಳ. ಎಡನೀರು ಭಾರತವಷ್ಟೇ ಅಲ್ಲ ವಿಶ್ವದಲ್ಲೇ ಗುರುತಿಸಲ್ಪಟ್ಟ ಪ್ರದೇಶವೆಂದರೆ ತಪ್ಪಾಗಲಾರದು.ದೇಶದ ಸ೦ವಿಧಾನಿಕ ವ್ಯವಸ್ಥೆಯೊಂದು ಅಲುಗಾಡದಂತೆ ಗಟ್ಟಿಯಾಗಿಸುವಲ್ಲಿ ಧರ್ಮ ಯುದ್ಧವೊಂದನ್ನು ಸಾರಿ ಅದರ ಬುನಾದಿಯನ್ನು ಸುಭದ್ರವಾಗಿಸಿದವರು ಎಡನೀರು ಮಠದ ಬ್ರಹ್ಮೈಕ್ಯರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಿನ್ನೆಲೆ

ಎಡನೀರು ಮಠದ ಗುರುಪರಂಪರೆಗೆ ಶತಮಾನಗಳ ಹಿನ್ನೆಲೆ ಇದೆ ಎಂಬುದಕ್ಕೆ ಅಲ್ಲಿರುವ 12 ಬೃಂದಾವನಸ್ತ ಗುರುಗಳ ಸಮಾಧಿಯೇ ಸಾಕ್ಷಿ.ಎಡನೀರು ಮಠ ಶಂಕರಾಚಾರ್ಯರ ಕಾಲದಲ್ಲೇ ಸ್ಥಾಪಿತವಾದ ಚತುರಾನ್ಮಯ ಪೀಠದ ಒಂದು ಒಂದು ಶಾಖಾಮಠವಾಗಿದ್ದು ತೋಟಕಾಚಾರ್ಯ ಪರಂಪರೆಯ ಮಠವೆಂಬುದಕ್ಕೆ ಆಧಾರಗಳಿವೆ ಎಂಬುದಾಗಿ ಸಂಶೋಧಕ ವೆಂಕಟರಾಜ ಪುಣಿಚಿತ್ತಾಯಯರು ಅಭಿಪ್ರಾಯ ಪಟ್ಟಿದ್ದಾರೆ.

ಭಾಗವತ ಸಂಪ್ರದಾಯ

ಎಡನೀರು ಮಠ ವಿಶಿಷ್ಠವಾದ ಭಾಗವತ ಸಂಪ್ರದಾಯದ ಮಠ.ಹಾಗಾಗಿಯೇ ಇಲ್ಲಿಯ ಪೀಠಾಧಿಪತಿಗಳು ಭಸ್ಮ ಮತ್ತು ಗೋಪಿ ಎರಡನ್ನೂ ಧಾರಣೆ ಮಾಡುವರು ಇಲ್ಲಿ ಅಕ್ಷತೆಯು೦ಟು ಅಂಗಾರಕ ಇಲ್ಲ.

ಗೋ ಪೂಜೆ

ಎಡನೀರು ಮಠದ ವಿಶೇಷವೆಂದರೆ ಇಲ್ಲಿ ನಿತ್ಯವೂ ಗೋಪೂಜೆ ನಡೆಯುತ್ತದೆ.ಅನಾದಿಯಿಂದಲೂ ನಡೆದು ಬಂದ ಈ ಸಂಪ್ರದಾಯ ಈಗಲೂ ಮುಂದುವರಿಯುತ್ತಿದೆ.ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಬ್ರಹ್ಮೈಕ್ಯರಾಗುವ ಹಿಂದಿನ ದಿನವೂ ತಮ್ಮ ನಿತ್ಯ ಪೂಜಾನುಷ್ಠಾನದ ಜೊತೆ ಗೋಪೂಜೆಯನ್ನೂ ಮಾಡಿದ್ದರು.ಹಾಗಾಗಿಯೇ ಇಲ್ಲಿರುವುದು ಪ್ರಚಾರದ ಗೋಶಾಲೆಯಲ್ಲ. ಪ್ರಸಾದದ ಗೋಶಾಲೆ.

ಯತಿಗಳ ಹೆಸರುಗಳು

ಎಡನೀರು ಮಠದ ಯತಿಗಳ ಹೆಸರು ಸಚ್ಚಿದಾನಂದ ಭಾರತೀ, ಈಶ್ವರಾನಂದ ಭಾರತೀ, ಬಾಲಕೃಷ್ಣಾನ೦ದ ಭಾರತೀ , ಕೇಶವಾನಂದ ಭಾರತೀ. ಈ ನಾಲ್ಕು ಅಭಿನಾಮದಿಂದಲೇ ಇರುತ್ತದೆ.

ಮಠದ ದೇವರುಗಳು

ಎಡನೀರು ಮಠದಲ್ಲಿ ಪ್ರಧಾನವಾಗಿ ದಕ್ಷಿಣಾಮೂರ್ತಿ, ಶ್ರೀರಾಮ, ಹನೂಮಂತ, ಶ್ರೀಕೃಷ್ಣ,ಶ್ರೀದೇವಿ, ಭೂದೇವಿ, ಯೋಗನಾರಸಿ೦ಹ , ದ್ವಾದಶ ಹಸ್ಥ ಗಣಪತಿ, ಅನ್ನಪೂರ್ಣೇಶ್ವರಿ ದೇವರಿದ್ದಾರೆ.

ಶಾಖಾಮಠ

1994 ರಲ್ಲಿ ಭಕ್ತರ ಬೇಡಿಕೆಯಂತೆ ಮಹಾನಗರ ಬೆಂಗಳೂರಿನಲ್ಲಿ ಶಾಖಾಮಠ ಸ್ಥಾಪಿಸಿದ್ದಾರೆ.

ಬ್ರಹ್ಮಚಾರಿ ಜಯರಾಮ ಮಂಜತ್ತಾಯರು ಇಂತಹ ಸುಭದ್ರ, ಧಾರ್ಮಿಕ , ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಎಡನೀರು ಮಠದ ನೂತನ ಯತಿಯಾಗಿ ಪೀಠಾರೋಹಣಗೊಳ್ಳಲಿರುವವರು ಇಷ್ಟರ ತನಕ ಮಠದ ಆಡಳಿತಾಧಿಕಾರಿಯಾಗಿ ಮಠದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಿದ, ಸದ್ಗುಣ, ಸುಶೀಲ ,ಹಸನ್ಮುಖಿ ಬ್ರಹ್ಮಚಾರಿ ಜಯರಾಮ ಮಂಜತ್ತಾಯರು.

ಪೀಠಾರೋಹಣಗೈಯಲಿರುವ ಬ್ರಹ್ಮಚಾರಿ ಶ್ರೀ ಜಯರಾಮ ಮಂಜತ್ತಾಯರು ಸಪ್ಟಂಬರ್ 19 ರಿಂದ ಕು೦ಬಳೆ ಸೀಮೆಯ ಎಲ್ಲಾ ಪ್ರಮುಖ ದೇವಸ್ಥಾನಗಳನ್ನು ಸಂದರ್ಶಿಸಿ, ಬಳಿಕ ಪರವೂರಿನ ಪವಿತ್ರ ಕ್ಷೇತ್ರಗಳನ್ನೂ ಸಂದರ್ಶಿಸಿ, ಸಪ್ಟಂಬರ್ 28 ರ ಶುಭಮುಹೂರ್ತದಲ್ಲಿ ಕಂಚಿ ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮಿಗಳಿಂದ ಸನ್ಯಾಸ ದೀಕ್ಶೆ ತೆಗೆದುಕೊಂಡು ಶ್ರೀ ಶ್ರೀ ಶ್ರೀ ಸಚ್ಛಿದಾನಂದ ಭಾರತೀ ಎಂಬ ಅಭಿನಾಮದೊಂದಿದೆ ಪುರಪ್ರವೇಶವನ್ನು ಮಾಡಲಿದ್ದಾರೆ.

ಈ ನಿಟ್ಟಿನಲ್ಲಿ ಅಕ್ಟೋಬರ್ 18ರಂದು ಎಡನೀರಿನಲ್ಲಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಪೀಠಾರೋಹಣ ಕಾರ್ಯಕ್ರಮ ನಡೆಯಲಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99