ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಆಗಿ ಮಹೇಶ್ ಪ್ರಸಾದ್
Thursday, October 1, 2020
ಮಂಗಳೂರು: ಮಂಗಳೂರು ಸಿಸಿಬಿ ಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಇದೀಗ ಮಹೇಶ್ ಕುಮಾರ್ ನೇಮಕರಾಗಿದ್ದಾರೆ.
ಕಾಪು ಪೋಲಿಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಮಂಗಳೂರು ಸಿಸಿಬಿ ಗೆ ವರ್ಗಾವಣೆ ಮಾಡಲಾಗಿದೆ.
ಕೆಲವು ವರ್ಷಗಳ ಹಿಂದೆ ಪುತ್ತೂರು ನಗರ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಕಾರ್ಯ ನಿರ್ವಹಿಸಿದ್ದರು.
ಪುತ್ತೂರಿನಲ್ಲಿ ಹತ್ತಾರು ಮನೆ ಕಳ್ಳತನ ಮಾಡಿದ್ದ ‘ಶುಕ್ರವಾರದ ಕಳ್ಳ’ ನ ಬಂಧನ, ನೆಲ್ಲಿಕಟ್ಟೆ ಕೋಮು ಪ್ರಕರಣ ಆರೋಪಿ ಬಂಧನ, ಪುತ್ತೂರಿನ ಕೋಮು ಸಾಮರಸ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪುತ್ತೂರಿನಲ್ಲಿ ನೂತನ ಟ್ರಾಫಿಕ್ ನಿಯಮ, ಅಶ್ವತ್ಥ ಮರ ಕೊಂಬೆ ತೆರವು ಮೊದಲಾದ ಜನಪಯೋಗಿ ಕಾರ್ಯ ಮಾಡಿದ್ದ ಹೆಸರುವಾಸಿ ಗಳಿಸಿದ್ದರು ಮಹೇಶ್ ಪ್ರಸಾದ್.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬಂಟ್ವಾಳದ ಶರತ್ ಮಡಿವಾಳ ಕೊಲೆ ಪ್ರಕರಣದ ತನಿಖಾ ಅಧಿಕಾರಿಯಾಗಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದರು.
ನಂತರ ಕಾಪು ಠಾಣೆಗೆ ವರ್ಗಾವಣೆಗೊಂಡ ಕೂಡಲೇ ಎದುರಾಗಿದ್ದು ಉಡುಪಿ, ದಕ್ಷಿಣಕನ್ನಡದಲ್ಲಿ ಬಾರಿ ಚರ್ಚೆಗೆ ಗ್ರಾಸವಾದ ಶಿರ್ವ ಚರ್ಚ್ ಫಾದರ್ ಆತ್ಮಹತ್ಯೆ ಪ್ರಕರಣ. ಈ ಪ್ರಕರಣವನ್ನು ಬೇದಿಸಿ, ಆತ್ಮಹತ್ಯೆ ಹಿಂದಿನ ಸತ್ಯವನ್ನು ಕಂಡುಹಿಡಿದರು.
ನಂತರ ಅಂತರಾಜ್ಯ ಕಳ್ಳರ ಗುಂಪನ್ನೂ ಬಂದಿಸಿ ‘ಸೂಪರ್ ಕಾಪ್ ‘ ಎನಿಸಿಕೊಂಡರು.
ಈಗಿನ ಸಿಸಿಬಿ ಇನ್ಸ್ ಪೆಕ್ಟರ್ ಆಗಿದ್ದ ಶಿವಪ್ರಕಾಶ್ ನಾಯ್ಕ್ ರವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದಾರೆ.