ರಾಜ್ಯದ ಸಿವಿಲ್‌ ನ್ಯಾಯಾಲಯಗಳ ದಸರಾ ರಜೆಯಲ್ಲಿ ಬದಲಾವಣೆ: ಹೈಕೋರ್ಟ್ ಅಧಿಸೂಚನೆ


ರಾಜ್ಯಾದ್ಯಂತ ಸಿವಿಲ್ ನ್ಯಾಯಾಲಯಗಳ ದಸರಾ ರಜೆಯಲ್ಲಿ ಬದಲಾವಣೆ ಮಾಡಿ ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 29.9.2020 ರಂದು ಹೊರಡಿಸಿದ ಅಧಿಸೂಚನೆಯ ವಿವರಗಳು

 ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿವಿಲ್ ನ್ಯಾಯಾಲಯಗಳು; ಕೌಟುಂಬಿಕ ನ್ಯಾಯಾಲಯಗಳು; ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯಗಳು; ಲಘು ವ್ಯವಹಾರಗಳ  ನ್ಯಾಯಾಲಯಗಳಿಗೆ 2020 ನೆಯ ಇಸವಿಯ ಕ್ಯಾಲೆಂಡರ್ ವರ್ಷದಲ್ಲಿ 19.10.2020 ರಿಂದ  24.10.2020 ರ ವರೆಗೆ ಆರು ದಿನಗಳ ದಸರಾ  ರಜೆಯನ್ನು ಘೋಷಿಸಲಾಗಿತ್ತು.

 ದಿನಾಂಕ 16.9.2020 ರಂದು ಜರಗಿದ ಮಾನ್ಯ ಕರ್ನಾಟಕ ಹೈಕೋರ್ಟಿನ ಪೂರ್ಣ ನ್ಯಾಯಾಲಯ ಸಭೆಯಲ್ಲಿ ಕೈಗೊಂಡ ನಿಣ೯ಯದ೦ತೆ ಗೌರವಾನ್ವಿತ  ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ದಸರಾ ರಜೆಯ ಅವಧಿಯನ್ನು ಕಡಿತಗೊಳಿಸಿ ದಿನಾಂಕ  29.9.2020 ರಂದು ಮಾನ್ಯ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.

ಸದರಿ ಅಧಿಸೂಚನೆಯ ಪ್ರಕಾರ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿವಿಲ್ ನ್ಯಾಯಾಲಯಗಳಿಗೆ ಈ ಹಿಂದೆ ಘೋಷಿಸಲಾದ ಆರು ದಿನಗಳ ದಸರಾ ರಜೆಯ ಬದಲಿಗೆ ದಿನಾಂಕ  27.10.2020 ರಿಂದ 29.10.2020 ರ ವರೆಗೆ ಮೂರು ದಿನಗಳ ದಸರಾ ರಜೆಯನ್ನು ಘೋಷಿಸಲಾಗಿದೆ.  

 ದಿನಾಂಕ 13.4.2020 ರಂದು ಮಾನ್ಯ ಕನಾ೯ಟಕ  ಹೈಕೋರ್ಟ್ ನ ಪೂರ್ಣ ನ್ಯಾಯಾಲಯ ಸಭೆ ಕೈಗೊಂಡ ನಿರ್ಣಯದಂತೆ ಹೈಕೋರ್ಟಿಗೆ ಮತ್ತು ರಾಜ್ಯದ ಎಲ್ಲಾ ಸಿವಿಲ್ ನ್ಯಾಯಾಲಯಗಳ 2020 ನೆ ಕ್ಯಾಲೆಂಡರ್ ವರ್ಷದ ಬೇಸಿಗೆ ರಜೆಯನ್ನು  ರದ್ದು ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು. 

ಮಾಹಿತಿಯನ್ನು ಹಂಚಿಕೊಂಡವರು: ಪ್ರಕಾಶ್ ನಾಯಕ್; ಶಿರಸ್ತೇದಾರರು; ಜುಡಿಶಿಯಲ್ ಸರ್ವೀಸ್ ಸೆಂಟರ್: ಮಂಗಳೂರು