ಕಡಬದಲ್ಲಿ ಕಂಠಪೂರ್ತಿ ಕುಡಿದು ವಿಜ್ಞಾನಿ ಮಾಡಿದ್ದು ಏನು ಗೊತ್ತಾ?

 (ಗಲ್ಪ್ ಕನ್ನಡಿಗ)ಮಂಗಳೂರು: ಕಡಬ ತಾಲೂಕಿನ ರಬ್ಬರ್ ಸಂಶೋಧನಾ ಕೇಂದ್ರದ ವಿಜ್ಞಾನಿಯೋರ್ವರು ಕಂಠ ಪೂರ್ತಿ ಕುಡಿದು ಜನರನ್ನು ಗೋಳು ಹೊಯ್ದುಕೊಂಡಿದ್ದಾರೆ. ಕುಡಿತದ ಅಮಲಿನಲ್ಲಿ ಅವರು ಹೊಸಮಠ ಹೊಳೆಗೆ ಹಾರಿ ಆತಂಕ ಸೃಷ್ಟಿಸಿದರು.


(ಗಲ್ಪ್ ಕನ್ನಡಿಗ)ಈ ವಿಜ್ಞಾನಿ ನದಿಗೆ ಹಾರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಡಬ ಪೊಲೀಸರು ನದಿಗೆ ಹಾರಿದ ವಿಜ್ಞಾನಿಯನ್ನು ನೀರಿನಿಂದ ಮೆಲ್ಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.ರವಿಚಂದ್ರ ಎಂಬ ತಮಿಳುನಾಡು ಮೂಲದ ವಿಜ್ಞಾನಿ ಕಂಠಪೂರ್ತಿ ಕುಡಿದು ಈ ಆವಾಂತರ ಎಸಗಿದ್ದಾರೆ. ಬೈಕನ್ನು ಹೊಸಮಠ ಸೇತುವೆಯಲ್ಲಿ ನಿಲ್ಲಿಸಿ ಅವರು ನದಿಗೆ ಹಾರಿದ್ದಾರೆ.

ಮೊದಲು ನದಿಗೆ ಹಾರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಇಬ್ಬರು ಮೆಸ್ಕಾಂ ಸಿಬ್ಬಂದಿಗಳು ರಕ್ಷಣೆಗೆ ಮುಂದಾಗಿದ್ದಾರೆ. ಈ ನಡುವೆ ಸ್ಥಳಕ್ಕೆ ಆಗಮಿಸಿದ ಕಡಬ ಎಸ್.ಐ.ರುಕ್ಮ ನಾಯ್ಕ್ ಮತ್ತು ಎ.ಎಸ್.ಐ.ಸುರೇಶ್, ಸಿಬ್ಬಂದಿ ಕನಕರಾಜ್ ವಿಜ್ಞಾನಿಯನ್ನು ಹೊಳೆಯಿಂದ ಮೇಲೆಕೆತ್ತಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.


(ಗಲ್ಪ್ ಕನ್ನಡಿಗ)ನದಿಯಿಂದ ಮೇಲಕ್ಕೆ ಎತ್ತಿದ ತಕ್ಷಣ ಈತ ಸ್ಥಳದಲ್ಲಿ ದೊಡ್ಡ ರಾದ್ದಾಂತವೇ ಮಾಡಿದ್ದು,ಕೊನೆಗೆ ಕೈಕಾಲು ಕಟ್ಟಿ ಆಸ್ಪತ್ರೆಗೆ ತರಲಾಯಿತು.


(ಗಲ್ಪ್ ಕನ್ನಡಿಗ)