ಪ್ರಿಯಕರನ ಜೊತೆಗೆ ಆಸ್ಟ್ರೇಲಿಯಾದಲ್ಲಿ ವಿವಾಹಿತೆಯ ಹನಿಮೂನ್! - ಸಿಕ್ಕಿ ಬಿದ್ದದ್ದು ಹೀಗೆ


(ಗಲ್ಫ್ ಕನ್ನಡಿಗ)ನವದೆಹಲಿ;ಇದೊಂದು ವಿಚಿತ್ರ ಕಥೆ. ಮದುವೆಯಾದ ಮಹಿಳೆಯೊಬ್ಬಳು ಪ್ರಿಯಕರನ ಜೊತೆಗೆ ಆಸ್ಟ್ರೇಲಿಯಾ ಕ್ಕೆ ಹನಿಮೂನ್ ಗೆ ತೆರಳಿ ಸಿಕ್ಕಿಬಿದ್ದಿದ್ದಾಳೆ.

(ಗಲ್ಫ್ ಕನ್ನಡಿಗ)ಉತ್ತರ ಪ್ರದೇಶದ ಪಿಲಿಭಿತ್ ನ‌ ಮಹಿಳೆ ಹೀಗೆ ಪ್ರಿಯಕರನ ಜೊತೆಗೆ ಹನಿಮೂನ್ ಗೆ ತೆರಳಿ ಸಿಕ್ಕಿಬಿದ್ದವಳು. ಈಕೆ ಉತ್ತರಪ್ರದೇಶದ ಪಿಲಿಭಿತ್ ನಲ್ಲಿ ಇದ್ದರೆ ಈಕೆಯ ಪತಿ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದರು.  ಪತಿ ಮುಂಬಯಿನಿಂದ ಬಂದು ಪತ್ನಿಯ ಯೋಗಕ್ಷೇಮ ನೋಡಿಕೊಂಡು ಹೋಗುತ್ತಿದ್ದರು. 

(ಗಲ್ಫ್ ಕನ್ನಡಿಗ)ಇದರ ನಡುವೆ ಈ ಮಹಿಳೆ ಖತರ್ನಾಕ್ ಐಡಿಯಾ ಮಾಡಿ ಪ್ರಿಯಕರನೊಂದಿಗೆ ವಿದೇಶಕ್ಕೆ ಸುತ್ತಾಡಲು ತೆರಳಿದ್ದಾಳೆ. ಜನವರಿಯಲ್ಲಿ ಈಕೆ ಪತಿಯ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆದು  ಆ ಪಾಸಪೋರ್ಟ್ ಮುಖಾಂತರ ಪ್ರಿಯಕರನನ್ನು ಕರೆದುಕೊಂಡು ಆಸ್ಟ್ರೇಲಿಯಾ ಹೋಗಿದ್ದಾಳೆ. ಜನವರಿಯಲ್ಲಿ ಆಸ್ಟ್ರೇಲಿಯಾ ಹೋದ ಈಕೆ ಮಾರ್ಚ್ ನಲತ ಹಿಂದಿರುಗಿ ಬರುವ ಪ್ಲಾನ್ ಮಾಡಿ ಹೋಗಿದ್ದಳು. ಆಷ್ಟು ಸಮಯದಲ್ಲಿ ಪತಿಗೆ ಈ ವಿಚಾರ ಗೊತ್ತಾಗುವುದಿಲ್ಲ ಎಂಬುದು ಆಕೆಯ ಪ್ಲಾನ್ ಆಗಿತ್ತು. 

(ಗಲ್ಫ್ ಕನ್ನಡಿಗ)ಆದರೆ ಅಷ್ಟರಲ್ಲಿ ಬಂದ ಕೊರೊನಾ ಲಾಕ್ ಡೌನ್ ಇವರ ಪ್ಲ್ಯಾನ್ ತಲೆಕೆಳಗಾಗಿಸಿದೆ. ಮಾರ್ಚ್ ನಲ್ಲಿ ಭಾರತಕ್ಕೆ ಮರಳಲು ಸಿದ್ದತೆ ಮಾಡುವಾಗ ಕೊರೊನಾ ಲಾಕ್ ಡೌನ್ ನಿಂದ ಇವರಿಬ್ಬರೂ ಆಸ್ಟ್ರೇಲಿಯಾದಲ್ಲಿ ಬಾಕಿಯಾಗಿದ್ದಾರೆ. 


(ಗಲ್ಫ್ ಕನ್ನಡಿಗ)ಮೇ ತಿಂಗಳಲ್ಲಿ ಪತಿ ಊರಿಗೆ ಬಂದಾಗ ಈಕೆಯ ವೃತ್ತಾಂತ ತಿಳಿದಿದೆ. ಪತಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದಾಗ ತನ್ನ ಹೆಸರಿನಲ್ಲಿ ಪತ್ನಿ ಪಾಸ್ ಪೋರ್ಟ್ ಮಾಡಿರುವುದು ತಿಳಿದುಬಂದಿದೆ.

(ಗಲ್ಫ್ ಕನ್ನಡಿಗ)ಆ.24 ಕ್ಕೆ ಆಸ್ಟ್ರೇಲಿಯಾದಲ್ಲಿ ಇದ್ದ ಈ ಜೋಡಿ ಭಾರತಕ್ಕೆ ಬಂದಿದ್ದು ಮಹಿಳೆಯ ಪತಿ ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ದೂರು ನೀಡಿದ್ದಾರೆ.

(ಗಲ್ಫ್ ಕನ್ನಡಿಗ)