ಸಿದ್ದಗಂಗಾ ಮಠಕ್ಕೆ ಚಿತ್ರನಟ ಸುದೀಪ್ ಭೇಟಿ......
Tuesday, September 1, 2020
ಸಿದ್ದಗಂಗಾ ಮಠಕ್ಕೆ ಚಿತ್ರನಟ ಸುದೀಪ್ ಭೇಟಿ......
(ಗಲ್ಫ್ ಕನ್ನಡಿಗ)ತುಮಕೂರು;ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಕನ್ನಡ ಖ್ಯಾತ ಚಿತ್ರನಟ ಸುದೀಪ್ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದರು.
(ಗಲ್ಫ್ ಕನ್ನಡಿಗ)ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಳೆ ನನ್ನ ಹುಟ್ಟುಹಬ್ಬ ಇರುವ ಪ್ರಯುಕ್ತ ಮಠಕ್ಕೆ ಬಂದಿದ್ದೇನೆ.ನನ್ನ ಕೈಲಾದ ಕೊಡುಗೆ ಕೊಡಬೇಕು ಅನ್ನೋ ಆಸೆಯಿಂದ ಇಲ್ಲಿಗೆ ಬಂದಿದ್ದೇನೆ.
ಈ ಬಾರಿ ಸರಳವಾಗಿ ನನ್ನ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
(ಗಲ್ಫ್ ಕನ್ನಡಿಗ) ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಯಾರು ಮನೆ ಬಳಿ ಬರುವುದು ಬೇಡ.ಅಲ್ಲಿ ಸೇರಿದರೆ ಎಲ್ಲರೂ ಹತ್ತಿರನೇ ನಿಲ್ತಾರೆ. ವಾಪಸ್ ಮನೆಗಳಿಗೆ ಸುರಕ್ಷಿತವಾಗಿ ಹೋಗ್ತಾರೆ ಅನ್ನೋ ನಂಬಿಕೆ ನನಗಿಲ್ಲಾ. ನನ್ನ ತಂದೆ ತಾಯಿನಾ ನೋಡಿ ತುಂಬಾ ದಿನವೇ ಆಯ್ತು.ದಿನಾ ಅವ್ರ ಆರ್ಶಿವಾದ ಇಲ್ಲದೇ ಮನೆಯಿಂದ ಹೊರಗೇ ಬರುತ್ತಿರಲಿಲ್ಲ ಎಂದರು.
(ಗಲ್ಫ್ ಕನ್ನಡಿಗ)ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ವಿಚಾರ ಕುರಿತಾಗಿ ನಾನು ಮಠದಲ್ಲಿ ಮಾತಾಡುವುದಿಲ್ಲ. ಇಂದ್ರಜಿತ್ ನನಗೆ ತುಂಬಾ ವರ್ಷದ ಪರಿಚಯ. ಸಿನಿಮಾ ರಂಗಕ್ಕೆ ಬರುವ ಮೊದಲಿನಿಂದಲೂ ಒಟ್ಟಿಗಿದ್ದೇವೆ. ಅವರೊಟ್ಟಿಗೆ ಕಾಣಿಸಿಕೊಂಡ ಮಾತ್ರಕ್ಕೇ ಏನು ಆಗಿಲ್ಲ ಎಂದರು.