ಮೂಡಬಿದಿರೆಯಲ್ಲಿ ಯುವಕನ ಬರ್ಬರ ಹತ್ಯೆ- ರಾತ್ರಿ ಸ್ಕೆಚ್ ಹಾಕಿದವರು ಯಾರು?(ಗಲ್ಪ್ ಕನ್ನಡಿಗ) ಮೂಡಬಿದಿರೆ: ಮೂಡಬಿದಿರೆಯ ಬಡಗಮಿಜಾರುವಿನಲ್ಲಿ   35  ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

(ಗಲ್ಪ್ ಕನ್ನಡಿಗ) ಮೂಡಬಿದಿರೆಯ ಬಡಗಮಿಜಾರುವಿನ  ಅರೆಮಜಲು ಪಲ್ಕೆ ನಿವಾಸಿ ಚಂದಯ್ಯ ಗೌಡ ಅವರ ಪುತ್ರ ಉಮೇಶ್ ಗೌಡ ಕೊಲೆಯಾದವರು.  ಬಡಗಮಿಜಾರು ಗ್ರಾಮದ ಅರೆಮಜಲುಪಲ್ಕೆ  ಎಂಬಲ್ಲಿ ಈ ಯುವಕನ ಮೃತದೇಹ ಸಿಕ್ಕಿದೆ. ಯುವಕನ ದೇಹ ರಕ್ತಸಿಕ್ತವಾಗಿದ್ದು ತಡರಾತ್ರಿ ಯುವಕನ ಮೇಲೆ  ಮಾರಾಕಾಸ್ತ್ರಗಳಿಂದ ಕಡಿದು ಕೊಲೆಗೈಯ್ಯಲಾಗಿದೆ. 
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

(ಗಲ್ಪ್ ಕನ್ನಡಿಗ) ಯುವಕನ ಕೊಲೆ ಪ್ರಕರಣದ ಬೆನ್ನತ್ತಿರುವ ಪೊಲೀಸರು ಯುವಕನ ಹತ್ಯೆಗೆ ರಾತ್ರಿ ಸ್ಕೆಚ್ ಹಾಕಿದವರು ಯಾರು ಎಂಬ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಯುವಕನ ಹತ್ಯೆಗೆ ನಿಖರ ಕಾರಣ  ತಿಳಿದುಬಂದಿಲ್ಲ. ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.