ಮಂಗಳೂರಿಗೆ ಕೊರೊನಾ ಶಾಕ್: ಈವರೆಗಿನ ಅತೀ ಹೆಚ್ಚು ಪ್ರಕರಣ ಇಂದು ದಾಖಲು
(ಗಲ್ಪ್ ಕನ್ನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚೆ ಇದ್ದರೂ ಇಂದು ಈವರೆಗಿನ ಅತೀ ಹೆಚ್ಚು ಪ್ರಕರಣ ದಾಖಲಾಗಿದೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಕೊರೊನಾ ಶಾಕ್ ನೀಡಿದೆ.
ಇದನ್ನು ಓದಿ; ಮೂಡಬಿದಿರೆಯಲ್ಲಿ ಯುವಕನ ಬರ್ಬರ ಹತ್ಯೆ- ರಾತ್ರಿ ಸ್ಕೆಚ್ ಹಾಕಿದವರು ಯಾರು?
(ಗಲ್ಪ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 414 ಪ್ರಕರನಗಳು ದಾಖಲಾಗಿದ್ದು ಜಿಲ್ಲೆಯ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಲ್ಲಿಯೂ ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾಗಿದೆ. ಇಂದು ಮಂಗಳೂರು ತಾಲೂಕಿನಲ್ಲಿ 222 ಪ್ರಕರಣ ಪತ್ತೆಯಾಗಿದ್ದರೆ ಬಂಟ್ವಾಳ 64, ಪುತ್ತೂರು 49 , ಸುಳ್ಯ 31, ಬೆಳ್ತಂಗಡಿ 28 ಪ್ರಕರಣ ದಾಖಲಾಗಿದೆ. ಹೊರಜಿಲ್ಲೆಯ 20 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಇಂದು ಕೊರೊನಾ ಕಾಣಿಸಿಕೊಂಡ 414 ಮಂದಿಯಲ್ಲಿ 196 ಮಂದಿ ಕೊರೊನಾ ಗುಣಲಕ್ಷಣಗಳನ್ನು ಹೊಂದಿರುವವರಾಗಿದ್ದರೆ 218 ಮಂದಿ ಕೊರೊನಾ ಲಕ್ಷಣ ಗಳು ಇಲ್ಲದವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13479 ಕ್ಕೆ ಏರಿಕೆಯಾಗಿದ್ದು ಭೀತಿ ಸೃಷ್ಟಿಸಿದೆ.
ಇದನ್ನು ಓದಿ;*ಮಾವಿನ ಮರದಲ್ಲಿ ಕಾದಿತ್ತು ಸಾವು: ನೆಲ್ಯಾಡಿಯಲ್ಲಿ ನಡೆಯಿತು ದುರ್ಘಟನೆ
(ಗಲ್ಪ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಆರು ಮಂದಿ ಸಾವನ್ನಪ್ಪಿದ್ದು , 346 ಮಂದಿ ಗುಣಮುಖರಾಗಿದ್ದಾರೆ. 2600 ಮಂದಿ ವಿವಿಧ ಆಸ್ಪತ್ರೆ , ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಗಲ್ಪ್ ಕನ್ನಡಿಗ)