
LOVE STORY; ಇದು ಟೀನೇಜ್ ಲವ್ ಅಲ್ಲ, ಆಸ್ಪತ್ರೆಯಲ್ಲಿ ಅರಳಿದ ಓಲ್ಡ್ ಏಜ್ ಲವ್!- 70 ರ ಅಜ್ಜ 55 ರ ಮಹಿಳೆಯ ಢಿಪರೆಂಟ್ ಲವ್ ಸ್ಟೋರಿ (video)
Saturday, September 5, 2020
(ಗಲ್ಫ್ ಕನ್ನಡಿಗ)ಭೋಪಾಲ; ಹದಿಹರೆಯದಲ್ಲಿ ಪ್ರೀತಿ ಪ್ರೇಮ ಅಂತ ತಿರುಗಾಡುವ ಟೀನೇಜ್ ಕಥೆಗಳನ್ನು ನೀವು ಕೇಳೆ ಇರ್ತಿರಿ. ಆದರೆ ಇಲ್ಲೊಂದು ಓಲ್ಡ್ ಏಜ್ ಲವ್ ಸ್ಟೋರಿಯ ಕಥೆಯನ್ನು ನಾವು ಹೇಳುತ್ತಿದ್ದೇವೆ. ಇದು ನಡೆದದ್ದು ಆಸ್ಪತ್ರೆಯಲ್ಲಿ ಎನ್ನುವುದು ವಿಶೇಷ
(ಗಲ್ಫ್ ಕನ್ನಡಿಗ)ಹೌದು ಮಧ್ಯಪ್ರದೇಶದ ಭೋಪಾಲದಲ್ಲಿ 70 ವರ್ಷದ ಅಜ್ಜನಿಗೂ ,55 ವರ್ಷದ ಮಹಿಳೆಗೂ ಓಲ್ಡ್ ಏಜ್ ನಲ್ಲಿ ಲವ್ ವುಂಟಾಗಿ ಮದುವೆಯೊಂದಿಗೆ ಸುಖಾಂತ್ಯ ಕಂಡಿದೆ.
(ಗಲ್ಫ್ ಕನ್ನಡಿಗ)70 ವರ್ಷದ ಓಂಕಾರ್ ಗೆ 4 ಗಂಡು ಮಕ್ಕಳು ಮತ್ತು 12 ಮೊಮ್ಮಕ್ಕಳು ಇದ್ದಾರೆ. ಇವರ ಪತ್ನಿ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದರು.
(ಗಲ್ಫ್ ಕನ್ನಡಿಗ)ಈ ಅಜ್ಜ ಇತ್ತೀಚೆಗೆ ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಬೆಡ್ ಪಕ್ಕದಲ್ಲಿ 55 ವರ್ಷದ ಮಹಿಳೆ ಗುಡ್ಡಿಬಾಯ್ ಕೂಡ ಚಿಕಿತ್ಸೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಬೆಡ್ ನಲ್ಲಿದ್ದ ಇವರು ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿದೆ.
(ಗಲ್ಫ್ ಕನ್ನಡಿಗ)ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಓಂಕಾರ್ ಅವರು ಗುಡ್ಡಿಬಾಯ್ ಅವರನ್ನು ನೇರ ಮನೆಗೆ ಕರೆದುಕೊಂಡು ಬಂದು ತನ್ನ ಮಕ್ಕಳು , ಮೊಮ್ಮಕ್ಕಳನ್ನು ಕರೆದು ತಾವಿಬ್ಬರು ಪ್ರೀತಿಸುವ ಬಗ್ಗೆ ತಿಳಿಸಿದ್ದಾರೆ. ಇಡೀ ಕುಟುಂಬ ಅವರ ಮದುವೆಗೆ ಒಪ್ಪಿಗೆ ನೀಡಿ ಹಳ್ಳಿಯ ಜನರ ಮುಂದೆ ವಿವಾಹ ಮಾಡಿಸಿದೆ. ಮದುವೆಗೆ ನೃತ್ಯ ,ಬೃಹತ್ ಮೆರವಣಿಗೆ ಆಯೋಜಿಸಲಾಗಿತ್ತು. ಮದುವೆ ದಿನ ಮದುಮಗಳು ಗೋಲ್ಡ್ ಹಾಗೂ ಕಂದುಬಣ್ಣದ ಸೀರೆಯನ್ನು ಉಟ್ಟರೆ ಅಜ್ಜ ಪ್ರಿಯತಮೆಯ ಉಡುಗೆಗೆ ಮ್ಯಾಚಿಂಗ್ ಆಗಿ ಹಳದಿ ಪೇಟ ಧರಿಸಿದ್ದರು.
ಇದನ್ನು ಓದಿ; SHOCKING; ಪ್ರಿಯಕರನ ಜೊತೆಗೆ ಓಡಿಹೋದ ಅಕ್ಕ, ಸುದ್ದಿ ಕೇಳಿ ತಂಗಿ ಸಾವು;ಉಡುಪಿಯಲ್ಲಿ ನಡೆಯಿತು ದಾರುಣ ಘಟನೆ
(ಗಲ್ಫ್ ಕನ್ನಡಿಗ)