ಮ್ಯಾಟ್ರಿಮೋನಿ ಮೂಲಕ ಪ್ರೇಮಕ್ಕೆ ತಿರುಗಿದ ಪರಿಚಯ; ಕಡಬದಲ್ಲಿ ಯುವತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್


(ಗಲ್ಪ್ ಕನ್ನಡಿಗ)ಮಂಗಳೂರು; ಇದೊಂದು ಮ್ಯಾಟ್ರಿಮೋನಿ ಪ್ರೇಮ್ ಕಹಾನಿ. ಇತ್ತೀಚೆಗೆ ಕಡಬದಲ್ಲಿ ನಾಪತ್ತೆಯಾದ ಶಿಕ್ಷಕಿ ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಯುವಕನೊಂದಿಗೆ ಪ್ರೇಮ ವಿವಾಹವಾಗುವ ಮೂಲಕ ಮನೆಯವರನ್ನು ಬೆಚ್ಚಿ ಬೀಳಿಸಿದ್ದಾಳೆ.

(ಗಲ್ಪ್ ಕನ್ನಡಿಗ)ಕಡಬ ತಾಲೂಕಿನ ಪೆರಾಬೆಯ ನಿವಾಸಿಯಾದ ಮಮತಾ ಬಲ್ಯ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದಳು.  ಈಕೆ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಈಕೆಯ ಹುಡುಕಾಟ ನಡೆಯುತ್ತಿತ್ತು. ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣವು ದಾಖಲಾಗಿತ್ತು‌.

(ಗಲ್ಪ್ ಕನ್ನಡಿಗ)ನಾಪತ್ತೆ ಪ್ರಕರಣ ಬೆಂಬತ್ತಿದ ಪೊಲೀಸರಿಗೆ ಈಕೆ ಬೆಂಗಳೂರಿನಲ್ಲಿ ಇರುವುದು ತಿಳಿದುಬಂದಿದೆ .ಬೆಂಗಳೂರಿಗೆ ಹೋಗಿ ತಪಾಸಣೆ ನಡೆಸಿದಾಗ ಈಕೆ  ಬೆಂಗಳೂರಿನ ಬಸವೇಶ್ವರ ನಗರದ ಕುರುಬರಹಳ್ಳಿಯ ಸತೀಶ್ ಎಂಬವರ ಜೊತೆಗೆ ಪತ್ತೆಯಾಗಿದ್ದಾಳೆ. ಪೊಲೀಸರಿಗೆ ಪತ್ತೆಯಾದ ಈಕೆ  ಮನೆಗೆ ಬರಲು ನಿರಾಕರಿಸಿದ್ದಾಳೆ. ಈಕೆಗೆ ಮೂರು ತಿಂಗಳ ಹಿಂದೆ  ಮ್ಯಾಟ್ರಿಮೋನಿ ಮೂಲಕ ಸತೀಶ್ ಪರಿಚಯವಾಗಿದ್ದು ಸೆ.1 ರಂದು ಇವರು ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.



(ಗಲ್ಪ್ ಕನ್ನಡಿಗ)