ಹುಟ್ಟುವ ಮೊದಲೆ ಸಾವನ್ನಪ್ಪಿದ ಎರಡು ಚಿರತೆ ಮರಿಗಳು: ಶಸ್ತ್ರಚಿಕಿತ್ಸೆ ಮೂಲಕ ತಾಯಿ ಚಿರತೆ ಪ್ರಾಣ ಉಳಿಸಿದ ವೈದ್ಯರು!(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನ ಪಿಳಿಕುಳ ಮೃಗಾಲಯದಲ್ಲಿ ಹುಟ್ಟುವ ಮೊದಲೆ ಎರಡು ಚಿರತೆ ಮರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.


(ಗಲ್ಪ್ ಕನ್ನಡಿಗ)ಚಿಂಟು ಎಂಬ ಚಿರತೆ ಗರ್ಭಿಣಿಯಾಗಿದ್ದು ಪ್ರಸವ ನೋವು ಕಾಣಿಸಿಕೊಂಡಿತ್ತು. ಆದರೆ ಪ್ರಸವ ಸಮಸ್ಯೆಯಿಂದ ಅದರ ಪರಿಸ್ಥಿತಿ ಗಂಭೀರವಾಗಿರುವುದನ್ನು ಕಂಡುಕೊಂಡ ಮೃಗಾಲಯದ ವೈದ್ಯಾಧಿಕಾರಿಗಳು ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದರು. ಎಂಟು ವರ್ಷದ ಈ ಚಿಂಟು ಚಿರತೆಗೆ ನಡೆದ ಶಸ್ತ್ರ ಚಿಕಿತ್ಸೆ ವೇಳೆ ಮರಿಗಳನ್ನು ವೈದ್ಯಾಧಿಕರಿಗಳು ಹೊರಗೆ ತೆಗೆಯಲು ಸಾಧ್ಯವಾಯಿತದರೂ ಅದಾಗಲೆ ಮರಿಗಳು ಮೃತಪಟ್ಟಿದ್ದವು.


(ಗಲ್ಪ್ ಕನ್ನಡಿಗ) ಮೃಗಾಲಯದ ವೈದ್ಯಾಧಿಕಾರಿಗಳಾದ ಡಾ ವಿಷ್ಣುದತ್ ಮತ್ತು ಡಾ. ಯಶಸ್ವಿ ಅವರು ಚಿರತೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು ಇದೀಗ ಚಿರತೆ ಚೇತರಿಸಿಕೊಳ್ಳುತ್ತಿದೆ. ಈ ಚಿರತೆ ಎಂಟು ವರ್ಷಗಳ ಹಿಂದೆ ಮೂಡಬಿದ್ರೆಯಲ್ಲಿ ಸಿಕ್ಕಿತ್ತು. ಚಿರತೆ ಐದು ದಿನಗಳ ಮರಿಯಾಗಿದ್ದು ಇದನ್ನು ಅರಣ್ಯಾಧಿಕಾರಿಗಳು ರಕ್ಷಿಸಿ ಚಿಂಟು ಎಂದು ಹೆಸರಿಟ್ಟು ಪಿಲಿಕುಳ ಮೃಗಾಲಯದಲ್ಲಿ ಸಾಕಿದ್ದರು. ಇದೀಗ ಪಿಲಿಕುಳ ನಿಸರ್ಗಧಾಮದಲ್ಲಿ ಹತ್ತು ಚಿರತೆಗಳಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್ ಜೆ ಭಂಢಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ


(ಗಲ್ಪ್ ಕನ್ನಡಿಗ)