ಆ ಒಂದು ಪತ್ರ ಕಡಬದಲ್ಲಿ ನಾಪತ್ತೆಯಾದ ಯುವಕನ ಪತ್ತೆಗೆ ಅಡ್ಡಿಯಾಗಿದೆ.. ಏನಿದೆ ಪತ್ರದಲ್ಲಿ?


(ಗಲ್ಫ್ ಕನ್ನಡಿಗ)ಮಂಗಳೂರು:  ಕಡಬ ತಾಲೂಕಿನಲ್ಲಿ ನಾಪತ್ತೆಯಾದ ಯುವಕನೊಬ್ಬನ ಪತ್ತೆಗೆ ಆತ ಬರೆದಿಟ್ಟಿರುವ ಪತ್ರವೆ ಅಡ್ಡಿಯಾಗಿದೆ.

(ಗಲ್ಫ್ ಕನ್ನಡಿಗ)ಕಡಬ ತಾಲೂಕಿನ ಬಲ್ಯ ಗ್ರಾಮದ ದೇರಾಜೆಯ ಚಂದ್ರಶೇಖರ್ ಎಂಬ 23 ವರ್ಷದ ಯುವಕ ನಾಪತ್ತೆಯಾದವರು. ದೇರಾಜೆಯಲ್ಲಿ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಸೆ. 4 ರಂದು ಕಾಣೆಯಾಗಿದ್ದರು. ಕೆಲಸಕ್ಕೆ ಹೋಗ್ತೇನೆ ಎಂದು ಮನೆಯಿಂದ ತೆರಳಿದ ಇವರು ಮನೆಗೆ ವಾಪಾಸಾಗಿಲ್ಲ. ಮೊಬೈಲ್ ನ್ನು ಕೂಡ ಕೊಂಡೋಗದೆ ಮನೆಯಲ್ಲಿ ಬಿಟ್ಟು ಬೈಕ್ ನಲ್ಲಿ ಹೋಗಿದ್ದಾರೆ.


(ಗಲ್ಫ್ ಕನ್ನಡಿಗ)ಇವರು ಮನೆಯಿಂದ ಹೋಗುವ ವೇಳೆ ಪತ್ರವೊಂದನ್ನು ಬರೆದಿಟ್ಟಿದ್ದಾರೆ.  ನನ್ನನ್ನು ಹುಡುಕಬೇಡಿ, ಹುಡುಕಿದರೆ ಜೀವಂತವಾಗಿ ಇರುವುದಿಲ್ಲ ಎಂದು ಚೀಟಿ ಬರೆದಿಟ್ಟು ನಾಪತ್ತೆಯಾಗಿದ್ದಾರೆ.

(ಗಲ್ಫ್ ಕನ್ನಡಿಗ)ಈಗ ಈ ಪತ್ರವೇ ನಾಪತ್ತೆಯಾದ ಯುವಕನ ಶೋಧಕ್ಕೆ ಅಡ್ಡಿಯಾಗಿದೆ. ಹುಡುಕಾಡಲು ಹೋದರೆ ಜೀವಕ್ಕೆ ಏನಾದರೂ ಅಪಾಯ ಮಾಡ್ತಾರ ಎಂಬ ಭಯ ಮನೆಯವರನ್ನು ಕಾಡುತ್ತಿದೆ. ಯುವಕನ ತಂದೆ ಧರ್ಣಪ್ಪ ಪೂಜಾರಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

(ಗಲ್ಫ್ ಕನ್ನಡಿಗ)