ಮಂಗಳೂರು ಐ ಟಿ ಕಛೇರಿ ಗೋವಾ ಕ್ಕೆ ಶಿಪ್ಟ್ ವಿಚಾರ: ಹೀಗೊಂದು ವಿಶ್ಲೇಷಣೆ
Wednesday, September 9, 2020
ಮಂಗಳೂರು ಐ ಟಿ ಕಛೇರಿ ಗೋವಾ ಕ್ಕೆ ಹೋದ ಬಗ್ಗೆ ಜನಪ್ರತಿನಿದಿಗಳು ಮತ್ತು ಮಾಧ್ಯಮ ಮುಖ್ಯವಾಗಿ ಉದಯವಾಣಿ ಪತ್ರಿಕೆ ಬಹುದೊಡ್ಡ ಸುದ್ದಿ ಮಾಡುತ್ತಿರುವುದು ಆಶ್ಚರ್ಯಕರ ಬೆಳವಣಿಗೆ ಮತ್ತು ಸ್ವಾಗತಾರ್ಹ. ಆದರೆ ಇಲ್ಲಿ ಕೆಲವು ವೈರುಧ್ಯಗಳಿವೆ ಎಂಬುದು ಗಮನದಲ್ಲಿರಬೇಕು. ಉಭಯ ಜಿಲ್ಲೆಗಳ ಒಟ್ಟು ಜನಸಂಖ್ಯೆ 3ಕೋಟಿ 130 ಲಕ್ಷದ ಆಸುಪಾಸಿರಬಹುದು. ಆ ಪೈಕಿ ಸದ್ರಿ ಕಚೇರಿಯಲ್ಲಿ ದಾಖಲೆ ಸಲ್ಲಿಸಬೇಕಾದವರು ಅಥವಾ ವ್ಯವಹಾರ ಮಾಡುವವರು ಕೇವಲ 4 ಲಕ್ಷ ಮಂದಿ. ಅವರಲ್ಲಿ ಖುದ್ದಾಗಿ ಹೋಗಿ ವ್ಯವಹರಿಸುವವರು ಬೆರಳೆಣಿಕೆಯ ಮಂದಿ.ಉಳಿದಂತೆ ಅವರವರ ತೆರಿಗೆ ಸಲಹೆಗಾರರು ಖಾತೆ ನಿರ್ವಹಿಸುತ್ತಾರೆ. ಅವರೂ ಈಗ ಡಿಜಿಟಲ್ ಇಂಡಿಯಾ ದ ರಾಯಭಾರಿ ಗಳಾಗಿ ಮಿಂಚಂಚೆ ಬಳಸುತ್ತಾರೆ. ಈ ಕಾರಣಗಳಿಂದ ಉದಯವಾಣಿ ಪತ್ರಿಕೆ ಮತ್ತು ರಾಜಕಾರಣಿಗಳು ಜನರೇ ಸಂಕಷ್ಟಕ್ಕೆ ಬಿದ್ದಿದ್ದಾರೆ ಎನ್ನುವ ರೀತಿ ಪ್ರಲಾಪಿಸುವುದು ವಿಪರ್ಯಾಸ. ಉದಯವಾಣಿ ಬಳಗ ದ ಹಿರಿಯರು ಸ್ಥಾಪಿಸಿದ ಸಿಂಡಿಕೇಟ್ ಬ್ಯಾಂಕ್ ಅಸ್ತಿತ್ವ ಕಳೆದು ಕೊಂಡು ನಿಷ್ಠೆ ಪ್ರಾಮಾಣಿಕತೆ ಯ ಸಂಕೇತ ವಾದ ನಾಯಿ ತ್ರಿಕೋನಾಕಾರದ ಸಂಕೋಲೆಗೆ ಸಿಲುಕಿತು. ಉಡುಪಿಯ ಸಾಹೇಬ್ರು ಹುಟ್ಟು ಹಾಕಿದ ಕಾರ್ಪೋರೇಶನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಯ್ತು ರೈತರ ಬ್ಯಾಂಕ್ ಎನಿಸಿದ್ದ ದೇಶದಲ್ಲಿ ಲಾಭ ಗಳಿಸುವ ಬ್ಯಾಂಕ್ ಗಳ ಪೈಕಿ ಪ್ರಥಮ 4 ಬ್ಯಾಂಕ್ ಗಳಲ್ಲಿ ಒಂದಾಗಿದ್ದ ವಿಜಯ ಬ್ಯಾಂಕ್ ಗುಜರಾತ್ ನ ನಷ್ಟದಲ್ಲಿದ್ದ ಬ್ಯಾಂಕ್ ಓಫ್ ಬರೋಡ ಎಂಬ ಬ್ಯಾಂಕ್ ನೊಂದಿಗೆ ವಿಲೀನವಾದಾಗ ಕನಿಷ್ಠ ಹೆಸರನ್ನಾದರೂ ಉಳಿಸಲು ಧ್ವನಿಯೆತ್ತಲಿಲ್ಲ ಆತ್ಮ ನಿರ್ಭರ ಭಾರತ ಉಪ್ಪಿನ ಕಾಯಿ ಸಂಡಿಗೆ ತಯಾರಿಸಲು ಚೀನಾ ದ ಆಪ್ ನಿರ್ಬಂದಿಸಲಷ್ಟೇ ಸೀಮಿತವೇ ? ನಮ್ಮ್ ಜಿಲ್ಲೆಯ ಸ್ವಾಭಿಮಾನ ಆತ್ಮ ಗೌರವ ಕಳೆದು ಕೊಂಡು ಆತ್ಮ ನಿರ್ಭರ ವೋಕಲ್ ಲೋಕಲ್ ಎಂದರೆ ಅದು ಆತ್ಮ ವಂಚನೆ ಅಲ್ಲವೇ?
ಈ ಕಛೇರಿ ಗೋವಾ ಕ್ಕೆ ಸ್ಥಳಾಂತರಿಸುವ ಬಗ್ಗೆ ನಾನು ಕಠಿಣ ಶಬ್ದಗಳಿಂದ ವಿರೋಧಿಸುತ್ತೇನೆ. ಆದರೆ ನಮ್ಮ ಆದ್ಯತೆ ಗಳನ್ನು ಗುರುತಿಸದ ಮಾಧ್ಯಮ ಮತ್ತು ನಾಯಕರನ್ನು ಅದೇ ಧಾಟಿ ಯಲ್ಲಿ ಟೀಕಿಸುವ ಹಕ್ಕು ನನ್ನದು. 2 ತಿಂಗಳಿಂದ ವಿಕಲ ಚೇತನರ ಮತ್ತು ಇತರರಿಗೆ ಸಿಗುವ ಮಾಸಾಶನ ಬಂದಿಲ್ಲ, ಕೊರೊನ ದಿಂದ ಮತ್ತು ತಪ್ಪು ಆರ್ಥಿಕತೆ ಯಿಂದ ಉದ್ಯೋಗ ಕಳೆದುಕೊಂಡು ಜೀವನ ನಿರ್ವಹಣೆ ಮಾಡಲಾಗದ ಲಕ್ಷಾಂತರ ಮಂದಿ ಪರಿತಪಿಸುತ್ತಿದ್ದಾರೆ. ಹೋರಾಟ ದಲ್ಲಿ ಆದ್ಯತೆ ಇರಬೇಕು ಬಹುಮುಖಿ ಸಮಾಜದ ಕೊನೆಯ ವ್ಯಕ್ತಿಗಳ ಸಮಸ್ಯೆ ಮೊದಲು ಪರಿಹಾರವಾಗಬೇಕು. 4 ಲಕ್ಷ ಧನಿಕರ ಸಮಸ್ಯೆ ಕೈಗೆತ್ತಿಕೊಳ್ಳುವುದಕ್ಕೆ ಮೊದಲು ನೆಟ್ಟಣದ ಕೃಷಿ ಸಂಶೋಧನಾ ಕೇಂದ್ರ ರಾಜ್ಯದಿಂದ ಹೊರಗೆ ಹೋದಾಗ ಇದೇ ಕೆಚ್ಚು ರೊಚ್ಚು ಪ್ರಕಟವಾಗಿದ್ದರೆ ಇಂದು ಈ ಸಮಸ್ಯೆ ಬರುತ್ತಿರಲಿಲ್ಲ. ನಮ್ಮ ರೈತರು ಭೂಮಿ ಕಳೆದುಕೊಂಡು ಕೊಂಕಣ್ ರೈಲು ನಿರ್ಮಿಸಿದರೆ ಅದನ್ನೂ ಕೇರಳಕ್ಕೆ ಒಪ್ಪಿಸಿ ಅಲ್ಲಿಂದ ಓಡಿಸಿದಾಗಲೂ ನಾವು ಸುಮ್ಮನಿದ್ದವರು. ಹೋರಾಟದ ಛಲ ಪಕ್ಷ ರಾಜಕೀಯ ದಿಂದ ದುರ್ಬಲ ವಾಗಿದೆ ಹಾಗಾಗಿ ಜಿಲ್ಲೆಗಳ ಪ್ರಗತಿ ವಿಗಾತಿಯಾಗಿದೆ
ಎಂ ಬಿ ಸದಾಶಿವ ಸುಳ್ಯ