ಸಖಿ ಸೆಂಟರ್ - ಭದ್ರತೆ, ಸ್ವಚ್ಛತಾ ಸಿಬ್ಬಂದಿಗಳಿಂದ ಅರ್ಜಿ ಆಹ್ವಾನ


(
ಗಲ್ಪ್ ಕನ್ನಡಿಗ)ಮಂಗಳೂರು:- ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ನೀಡುವರೇ ಜಿಲ್ಲಾ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಕಾರ್ಯನಿರ್ವಹಿಸುತ್ತಿರುವ “ಸಖಿ” (ಒನ್ ಸ್ಟಾಪ್ ಸೆಂಟರ್) ಇಲ್ಲಿ ತೆರವಾಗಿರುವ ಭದ್ರತೆ/ ಸ್ವಚ್ಛತಾ 01 ಭದ್ರತೆ/  ಸ್ವಚ್ಛತಾ ಸಿಬ್ಬಂದಿ ಹುದ್ದೆಯನ್ನು ಹೊರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
   

(ಗಲ್ಪ್ ಕನ್ನಡಿಗ)22 ರಿಂದ 35 ವರ್ಷದೊಳಗಿನ ಕನಿಷ್ಠ 7ನೇ ತರಗತಿ ತೇರ್ಗಡೆ ಹೊಂದಿರುವ ಮಂಗಳೂರು ನಗರದಲ್ಲಿ ವಾಸ್ತವ್ಯವಿರುವ, ಕರ್ತವ್ಯ ನಿರ್ವಹಣೆಯ ಅನುಭವ ಇದ್ದಲ್ಲಿ ಪ್ರಾಶಸ್ತ್ಯ ನೀಡಲಾಗುವುದು. ಮಾಸಿಕ ಗೌರವಧನ ರೂ.15,000 (ಎಲ್ಲಾ ಕಡಿತಗಳನ್ನು ಒಳಗೊಂಡಿರುತ್ತದೆ.) ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 18 ಕೊನೆಯ ದಿನ.
     

(ಗಲ್ಪ್ ಕನ್ನಡಿಗ)ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಮಂಗಳೂರು ಅಥವಾ ದೂರವಾಣಿ ಸಂಖ್ಯೆ:0824-2451254 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


(ಗಲ್ಪ್ ಕನ್ನಡಿಗ)