ಮೋದಿ ಹುಟ್ಟುಹಬ್ಬಕ್ಕೆ ಪ್ಲಾಸ್ಮಾ ದಾನ ಮಾಡಿದ ಶಾಸಕ ಭರತ್ ಶೆಟ್ಟಿ (video)
(ಗಲ್ಫ್ ಕನ್ನಡಿಗ)ಮಂಗಳೂರು; ಮೋದಿ ಹುಟ್ಟುಹಬ್ಬಕ್ಕೆ  ಶಾಸಕ ಭರತ್ ಶೆಟ್ಟಿ ಇಂದು ಪ್ಲಾಸ್ಮಾ ದಾನ ಮಾಡುವ ಮೂಲಕ ಮೆಚ್ಚುಗೆ ಗೆ ಪಾತ್ರರಾಗಿದ್ದಾರೆ.

(ಗಲ್ಫ್ ಕನ್ನಡಿಗ)ಕೊರೊನಾ ಪಾಸಿಟಿವ್ ಆಗಿದ್ದ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಅವರು ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡುವ ಮೂಲಕ‌  ಎಲ್ಲರಿಗೂ ಮಾದರಿಯಾಗಿದ್ದಾರೆ. ಜು. 2 ರಂದು ಕೊರೊನಾ ಪಾಸಿಟಿವ್ ಆಗಿದ್ದ ಶಾಸಕರು ಚಿಕಿತ್ಸೆ ಪಡೆದು ಬಳಿಕ ಕ್ವಾರಂಟೈನ್ ನಲ್ಲಿದ್ದರು.ಒಂದು ವಾರದ ಹಿಂದೆ ಸಂಪೂರ್ಣ ಗುಣಮುಖರಾದ ಶಾಸಕ ಭರತ್ ಶೆಟ್ಟಿ ಕೊರೋನಾ ಪಾಸಿಟಿವ್ ಆಗಿರುವ ವ್ಯಕ್ತಿಯೋರ್ವರಿಗೆ ಇಂದು ಪ್ಲಾಸ್ಮಾ ದಾನ ಮಾಡಿದ್ದಾರೆ.