ಪತಿಯ ಉಳಿಸಲು ಮಹಿಳೆಯ ಕಣ್ಣೀರಿಗೆ 14 ಲಕ್ಷ ಸಿಕ್ಕರೂ ಮಾಂಗಲ್ಯ ಕಿತ್ತ ಯಮರಾಜ (Video)
Thursday, September 17, 2020
(ಗಲ್ಫ್ ಕನ್ನಡಿಗ)ಮಂಗಳೂರು; ಇದು ಮಹಿಳೆಯೊಬ್ಬರ ಕಣ್ಣೀರಿನ ಕಥೆ. ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಮಹಿಳೆಯೊಬ್ಬರ ಪತಿ ಹೃದ್ರೋಗದಿಂದ ಬಳಲುತ್ತಿದ್ದರು. ಜೊತೆಗೆ ಕಿಡ್ನಿವೈಫಲ್ಯವು ಆಗಿತ್ತು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ತನ್ನ ಚಿನ್ನಾಭರಣ ಮಾರಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
(ಗಲ್ಫ್ ಕನ್ನಡಿಗ)ಮೆಡಿಕಲ್ ಶಾಪ್ ನಲ್ಲಿ ಕಬೀರ್ ಎಂಬವರಲ್ಲಿ ಮಹಿಳೆ ಚಿಕಿತ್ಸೆ ಗೆ ಹಣವಿಲ್ಲ ಎಂಬ ಸಮಸ್ಯೆ ಹೇಳಿದ್ದರು. ಅವರು ಮುಲ್ಕಿಯ ಆಪತ್ಬಾಂದವ ಆಸೀಫ್ ಎಂಬವರಿಗೆ ವಿಷಯ ತಿಳಿಸಿದ್ದರು. ಆಸೀಫ್ ಅವರು ಆಸ್ಪತ್ರೆಗೆ ಬಂದು ಮಹಿಳೆಯ ಕಣ್ಣೀರಿನ ಕಥೆ ವಿಡಿಯೋ ಮಾಡಿ ಅದರಲ್ಲಿ ಹಣ ಕಳುಹಿಸಲು ಬೇಕಾದ ಮಾಹಿತಿ ಎಡಿಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ವಿಡಿಯೋ ವೈರಲ್ ಆಗಿ ಮಹಿಳೆಯ ಖಾತೆಗೆ ಜನರು ಹಣ ಹಾಕಿದ್ದಾರೆ. ಹೀಗೆ ಹಾಕಿದ ಹಣ 14 ಲಕ್ಷ ದಾಟಿದೆ.
(ಗಲ್ಫ್ ಕನ್ನಡಿಗ)ಗಂಡನನ್ನು ಉಳಿಸಲು ಮಹಿಳೆಯ ಕಣ್ಣೀರಿನ ವಿಡಿಯೋ ಗೆ ನೆರವು ಹರಿದು ಬಂದರೂ ಯಮರಾಜ ಮಾತ್ರ ಕರುಣೆ ತೋರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಪತಿ ಕೊರೊನಾ ಭಾಧಿತರಾಗಿ ಸಾವನ್ನಪ್ಪಿದ್ದಾರೆ. ಪತಿಯ ಚಿಕಿತ್ಸೆಗೆ ಹಣ ಒಟ್ಟುಮಾಡಿದರೂ ಪತಿಯನ್ನು ಉಳಿಸಿಕೊಳ್ಳಲಾಗದೆ ಮಹಿಳೆ ಕಂಬನಿ ಸುರಿಸುತ್ತಿದ್ದಾರೆ.
(ಗಲ್ಫ್ ಕನ್ನಡಿಗ)