ಅನುಶ್ರೀ ನಾಪತ್ತೆ ಎಂದು ಸುಳ್ಳೆಸುಳ್ಳು ಬ್ರೇಕಿಂಗ್ ಹಾಕಿದ ಟಿವಿ ಚಾನೆಲ್ ಗಳು: ಸಂಜೆ ಮಂಗಳೂರು ಪೊಲೀಸರ ನೋಟಿಸ್ ಮನೆಯಲ್ಲೆ ಸ್ವೀಕಾರ
Thursday, September 24, 2020
(ಗಲ್ಫ್ ಕನ್ನಡಿಗ)ಮಂಗಳೂರು; ರೂಪದರ್ಶಿ ಅನುಶ್ರೀ ಡ್ರಗ್ ಪಾರ್ಟಿಯಲ್ಲಿ ಭಾಗಿಯಾಗಿದ್ದಳು ಎಂದು ಕಿಶೋರ್ ಶೆಟ್ಟಿ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಮಂಗಳೂರು ಇಕಾನೆಮಿಕ್ ಆ್ಯಂಡ್ ನಾರ್ಕೆಟಿಕ್ ಪೊಲೀಸರು ಬೆಂಗಳೂರಿಗೆ ಹೋಗಿ ನೋಟಿಸ್ ತಲುಪಿಸಿದ್ದಾರೆ.
(ಗಲ್ಫ್ ಕನ್ನಡಿಗ)ಕಿಶೋರ್ ಶೆಟ್ಟಿ ನೀಡಿದ ಮಾಹಿತಿಯಂತೆ ಅನುಶ್ರೀ ಡ್ರಗ್ ಪಾರ್ಟಿಯಲ್ಲಿ ಭಾಗಿಯಾಗಿದ್ದಳು. ಈ ಕಾರಣದಿಂದ ಅನುಶ್ರೀಗೆ ವಿಚಾರಣೆ ನಡೆಸಲು ನೋಟಿಸ್ ನೀಡಲಾಗಿತ್ತು. ಅನುಶ್ರೀಗೆ ನೋಟಿಸ್ ನೀಡಿದ ವಿಚಾರ ಸುದ್ದಿ ಮಾಡಿದ ಟಿವಿ ಮಾಧ್ಯಮಗಳು ಅನುಶ್ರೀ ನಾಪತ್ತೆ ಎಂಬ ಸುಳ್ಳು ಸುದ್ದಿಯನ್ನು ಬಿತ್ತರಿಸಿದೆ. ಅನುಶ್ರೀ ಮನೆಯಲ್ಲಿ ಇದ್ದರೂ ಸುದ್ದಿ ನೀಡುವ ಅವಸರದಲ್ಲಿ ಸುಳ್ಳು ಸುದ್ದಿಯನ್ನು ನೀಡಿದೆ. ಕನ್ನಡದ ಕೆಲವು ಟಿವಿ ಚಾನೆಲ್ ಗಳು ಇಂತಹ ಹಲವು ಸುದ್ದಿಗಳನ್ನು ಹಿಂದೆಯು ನೀಡಿದ್ದು ಈ ಬಾರಿಯು ಸುಳ್ಳು ಸುದ್ದಿ ನೀಡಿ ಅದಕ್ಕೊಂದು ವೀಕ್ಷಕರಲ್ಲಿ ಕ್ಷಮೆಯು ಕೇಳದೆ ಟಿಆರ್ ಪಿ ಸುದ್ದಿ ಪ್ರಸಾರದಲ್ಲಿ ತೊಡಗಿದೆ.
(ಗಲ್ಫ್ ಕನ್ನಡಿಗ)ಸಂಜೆಯ ವೇಳೆಗೆ ಮಂಗಳೂರಿನ ಪೊಲೀಸರು ಅನುಶ್ರೀ ಮನೆ ತಲುಪಿದ್ದು ಈ ವೇಳೆ ಅನುಶ್ರೀ ಮನೆಯಲ್ಲಿದ್ದು ನೋಟಿಸ್ ಸ್ವೀಕರಿಸಿದ್ದಾರೆ. ಪೊಲೀಸರು ಶನಿವಾರ ವಿಚಾರಣೆಗೆ ಮಂಗಳೂರಿಗೆ ಹಾಜರಾಗುವಂತೆ ಆಕೆಗೆ ಸೂಚಿಸಿದ್ದಾರೆ.
(ಗಲ್ಫ್ ಕನ್ನಡಿಗ)