ಮಂಗಳೂರಿನ ಬಾಂಬ್ ಆರೋಪಿಗೆ ಮಂಪರು ಪರೀಕ್ಷೆ(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಬಾಂಬ್ ಇರಿಸಿದ ಆರೋಪಿ ಆದಿತ್ಯರಾವ್ ಮಂಪರು ಪರೀಕ್ಷೆ ಇಂದು ನಡೆಯಲಿದೆ.


(ಗಲ್ಫ್ ಕನ್ನಡಿಗ)2020 ಜನವರಿಯಲ್ಲಿ ಈತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಕೂರುವ ಜಾಗದಲ್ಲಿ ಬಾಂಬ್ ಇರಿಸಿದ್ದ. ಬಳಿಕ ಇದನ್ನು ಪತ್ತೆಹಚ್ಚಿ ನಿಷ್ಕ್ರಿಯ ಮಾಡಲಾಗಿತ್ತು.


(ಗಲ್ಫ್ ಕನ್ನಡಿಗ)ಪ್ರಕರಣದಲ್ಲಿ ಆರೋಪಿ ಆದಿತ್ಯರಾವ್ ಬೆಂಗಳೂರಿನಲ್ಲಿ ಡಿಜಿ ಕಚೇರಿಗೆ ಹೋಗಿ ಶರಣಾಗಿದ್ದ. ಬಳಿಕ ಮಂಗಳೂರು ಪೊಲೀಸರು ಮಂಗಳೂರಿಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದರು. ತನಿಖಾ ದೃಷ್ಟಿಯಿಂದ ಈತನ ಮಂಪರು ಪರೀಕ್ಷೆ ಅಗತ್ಯವಿದ್ದು ಈ ಹಿನ್ನೆಲೆಯಲ್ಲಿ ಇಂದು ಆತನ ಮಂಪರು ಪರೀಕ್ಷೆ ನಡೆಯಲಿದೆ. ಆರೋಪಿ ಆದಿತ್ಯರಾವ್ ನನ್ನು ನಿನ್ನೆ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು.

(ಗಲ್ಫ್ ಕನ್ನಡಿಗ)