ಪ್ರಧಾನಿ ಮೋದಿಯನ್ನು ಬಿಡದ ಹ್ಯಾಕರ್ಸ್;ಮಧ್ಯರಾತ್ರಿ ಟ್ವೀಟರ್ ಖಾತೆ ಹ್ಯಾಕ್, ಬಿಟ್ ಕಾಯಿನ್ ಬೇಡಿಕೆ!
Thursday, September 3, 2020
(ಗಲ್ಫ್ ಕನ್ನಡಿಗ)ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ ಸೈಟ್ ಗೆ ಲಿಂಕ್ ಹೊಂದಿರುವ ಟ್ವಿಟರ್ ಖಾತೆಯನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡಿದ ಘಟನೆ ಮಧ್ಯರಾತ್ರಿ ನಡೆದಿದೆ.
(ಗಲ್ಫ್ ಕನ್ನಡಿಗ)ಬುಧವಾರ ರಾತ್ರಿ ಸುಮಾರು 3 ಗಂಟೆಗೆ ಹ್ಯಾಕರ್ಸ್ ಪ್ರಧಾನಿ ಅವರ ವೈಯಕ್ತಿಕ ವೆಬ್ಸೈಟ್ narendramodi.in ಗೆ ಲಿಂಕ್ ಆಗಿರುವ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಜಾನ್ ವಿಕ್ ಎಂಬಾತ ಹ್ಯಾಕ್ ಮಾಡಿದ್ದು ಬಳಿಕ ಆತ ಇದರಲ್ಲಿ ಕ್ರಿಪ್ಟೋ ಕರೆನ್ಸಿ ಬೇಡಿಕೆ ಇಟ್ಟಿದ್ದಾನೆ. ನಾನು ಕೊರೊನಾಗೆ ಸಂಬಂಧಿಸಿದಂತೆ ಇರುವ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದಾನ ಮಾಡಿ. ಭಾರತದಲ್ಲಿ ಇದೀಗ ಕ್ರಿಪ್ಟೋ ಕರೆನ್ಸಿ ಆರಂಭವಾಗಿದೆ. ನಿಮ್ಮ ಬಿಟ್ ಕಾಯಿನ್ ಈ ಖಾತೆಗೆ ನೀಡಿ ಎಂದು ಖಾತೆ ಸಂಖ್ಯೆ ನೀಡಿ ಟ್ವೀಟ್ ಮಾಡಿದ್ದಾನೆ.
(ಗಲ್ಫ್ ಕನ್ನಡಿಗ)ಇನ್ನೊಂದು ಟ್ವೀಟ್ ನಲ್ಲಿ ನಾವು ಪೇಟಿಎಂ ಮಾಲ್ ಹ್ಯಾಕ್ ಮಾಡಿಲ್ಲ ಎಂದು ಬರೆದುಕೊಂಡಿದ್ದಾನೆ.
(ಗಲ್ಫ್ ಕನ್ನಡಿಗ)ಈ ಎರಡು ಟ್ವೀಟ್ ಗಳನ್ನು ಕೆಲವೆ ಕ್ಷಣಗಳಲ್ಲಿ ಡಿಲೀಟ್ ಮಾಡಲಾಗಿದೆ. ಪ್ರಧಾನಿ ಅವರ ಟ್ವಿಟರ್ ಖಾತೆಯಲ್ಲಿ 25 ಲಕ್ಷ ಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
(ಗಲ್ಫ್ ಕನ್ನಡಿಗ)