-->

ಸುಮಲತಾ ಸೊಂಟಕ್ಕೆ ಬಿಎಸ್‌ವೈ ಕೈ!: ಪ್ರಕರಣದ ಹಿಂದಿರುವ ಕೊಳಕು ಮನಸುಗಳು

ಸುಮಲತಾ ಸೊಂಟಕ್ಕೆ ಬಿಎಸ್‌ವೈ ಕೈ!: ಪ್ರಕರಣದ ಹಿಂದಿರುವ ಕೊಳಕು ಮನಸುಗಳು


 ಗ್ಲಾಡ್ಸನ್ ಅಲ್ಮೆಡಾ

 

ಟ್ರೋಲ್, ಅಪಹಾಸ್ಯ ಹಾಗೂ ಪ್ರಶ್ನೆಗೊಳಪಡಬೇಕಾಗಿರುವುದು ಮುಖ್ಯಮಂತ್ರಿ ಯಡಿಯೂರಪ್ಪನವರೂ ಅಲ್ಲ, ಸಂಸದೆ-ನಟಿ ಸುಮಲತಾರವರೂ ಅಲ್ಲ. ಬದಲಾಗಿ ಇಂಥದೊಂದು ಶೂಟಿಂಗ್ ಮಾಡಿ, ಅದನ್ನು 'ವಿವಾದ' ಮಾಡಿರುವ ವಿಕೃತ ಕ್ಯಾಮಾರಮ್ಯಾನ್ ಹಾಗೂ ವಾಹಿನಿ.


ಯಡಿಯೂರಪ್ಪನವರು ಬೇಕೆಂತಲೇ ಮುಟ್ಟಿದರೋ, ಇಲ್ಲ ಆಕಸ್ಮಾತ್ ಆಗಿ ಮುಟ್ಟಿದರೋ ಇಲ್ಲ ನೀರಿಗೆ ಹತ್ತಿರದಲ್ಲಿದ್ದ ಸಂಸದೆ ಆಯತಪ್ಪಿ ಬೀಳದಿರಲಿ ಎಂದು ಮನುಷ್ಯ ಸಹಜ ರೀತಿಯಲ್ಲಿ ಪ್ರತಿಕ್ರಯಿಸದರೋ, ನನಗೊತ್ತಿಲ್ಲ.

 

ಆದರೆ ಅದರಲ್ಲಿ ದೊಡ್ಡ ವಿಷಯ, ವಿವಾದವೇನೂ ಕಂಡಿಲ್ಲ. ವಿವಾದವೇ ಆಗಿದ್ದರೇ, ಚಪಲತನವೇ ಆಗಿದ್ದರೇ, ಅದರ ಬಗ್ಗೆ ಮೊಟ್ಟಮೊದಲು ಪ್ರಶ್ನೆ ಎತ್ತಬೇಕಾಗಿದ್ದು ಸಂಸದೆ ಸುಮಲತಾರವರೇ. ಓರ್ವ ಹೆಣ್ಣಿಗೆ ನೈಸರ್ಗಿಕವಾಗಿ ಬಂದಿರುವ ಒಂದು ವರದಾನವೆಂದರೆ ತನ್ನ ಮುಟ್ಟುವ ಕೈಗಳಾಗಲಿ, ತನ್ನನ್ನು ನೋಡುವ ದೃಷ್ಟಿಯಾಗಲಿ ಸರಿಯಾಗಿರುವಂಥದ್ದೋ ಇಲ್ಲ ಕೆಟ್ಟದ್ದೋ ಎಂದು ಘಳಿಗೆ ಮಾತ್ರದಲ್ಲಿ ಕಂಡುಕೊಳ್ಳುವ ಶಕ್ತಿ. ಹಾಗಾಗಿ ಯಡಿಯೂರಪ್ಪನವರ ಸ್ಪರ್ಶದಲ್ಲಿ ಅಂಥದೊಂದು ಭಾವವಿದ್ದಿದ್ದರೆ ಸುಮಲತಾರವರು ಪ್ರತಿಕ್ರಿಯೆ ಕೊಟ್ಟಿರುತ್ತಿದರು. 

 ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹಾಗಾಗಿ ಇದೊಂದು ದೊಡ್ಡ ವಿಷಯ ಆಗಲೇಬಾರದು. ಇದು ಕೇವಲ ಯಡಿಯೂರಪ್ಪನವರಿಗೆ ಸಂಬಂಧಪಟ್ಟ ವಿಷಯನೂ ಅಲ್ಲ. ಸುಮಲತಾರವರೂ ಇದರಲ್ಲಿದ್ದಾರೆ, ಆಕೆಯ ಘನತೆಗೂ ಚ್ಯುತಿಯಾಗುತ್ತೆ, ಆಕೆಯ ಚಾರಿತ್ರ್ಯಹರಣನೂ ಆಗುತ್ತೆ ಎನ್ನುವುದರ ಅರಿವಿಲ್ಲದೇ ಟ್ರೋಲ್ ಮಾಡುತ್ತಿರುವವರು ವಿಕೃತರು. ಇಲ್ಲಿ ಯಡಿಯೂರಪ್ಪನವರನ್ನು ಟ್ರೋಲ್ ಮಾಡುತ್ತಿರುವ ಮಂದಿಯೇ ತುಂಬಿರುವ ಬಸ್ಸಿನಲ್ಲಿ ಮಹಿಳೆಯರು, ಹುಡುಗಿಯರ ಸ್ಪರ್ಶಕ್ಕಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾರೆಂದು ಬಿಡಿಸಿ ಹೇಳಬೇಕೇ? ಚರ್ಚ್, ದೇವಸ್ಥಾನ, ಹಬ್ಬ, ಜಾತ್ರೆಯ ಜನಜಂಗುಳಿಯಲ್ಲಿ ಸಿಕ್ಕ-ಸಿಕ್ಕ ಮಹಿಳೆಯರ ನಿತಂಬ ಸವರುತ್ತಾ, ಅವರ ಎದೆ, ಸೊಂಟ, ಭುಜಗಳನ್ನು ವಿಕೃತವಾಗಿ ಮುಟ್ಟುವ ಮಂದಿಯೇ ಇವತ್ತು ಯಡಿಯೂರಪ್ಪನವರನ್ನು ಟ್ರೋಲ್ ಮಾಡುತ್ತಿದ್ದಾರೆ. ದಾರಿಯಲ್ಲಿ ಮಹಿಳೆಯೊಬ್ಬಳು ನಡೆದುಕೊಂಡು ಹೋಗುವಾಗ, ಈ ವಿಕೃತರು ಆಕೆಯನ್ನು ಯಾವ ದೃಷ್ಟಿಯಲ್ಲಿ ನೋಡುತ್ತಾರೆ, ಹೇಗೆಲ್ಲಾ ಸಂಭೋದಿಸುತ್ತಾರೆ, ಯಾವೆಲ್ಲಾ ಸೂಚನೆಗಳನ್ನು, ಕಾಮೆಂಟ್‍ಗಳನ್ನು ಪಾಸ್ ಮಾಡುತ್ತಾರೆಂದು ಹೇಳಬೇಕೇ? ಹಾಗಾಗಿ ನೀವು ಯಾರೇ ಆಗಿದ್ದರೂ, ಯಾವುದೇ ಪಕ್ಷದವರು ಆಗಿದ್ದರೂ, ಯಾವುದೇ ಹುದ್ದೆಯಲ್ಲಿರುವವರಾಗಿದ್ದರೂ, ಇಂಥ ವಿಕೃತಿಯನ್ನು ಮೆರೆಯುತ್ತಿರುವವರಾದರೆ, ಇದನ್ನು ಬೆಂಬಲಿಸುತ್ತಿರುವವರಾದರೆ...

 

ಹೌದು ಬಿಜೆಪಿಗರು ಇಂಥದೇ ವಿಕೃತಿಯನ್ನು ಮೆರೆಯುತ್ತಾರೆ, ಸಿದ್ದರಾಮಯ್ಯನವರ ಬಗ್ಗೆ, ರಾಹುಲ್, ಸೋನಿಯಾ ಗಾಂಧೀಯವರ ಬಗ್ಗೆ, ರಮ್ಯಾರವರ ಬಗ್ಗೆ ಹಾಗೂ ಇನ್ನಿತರರ ಬಗ್ಗೆ ತೀರಾ ಅವಹೇಳನಕಾರಿಯಾಗಿ, ತುಚ್ಚವಾಗಿ ಕಾಮೆಂಟ್ ಮಾಡುತ್ತಾರೆ, ನಿಂದಿಸುತ್ತಾರೆ ಎಂದೆಲ್ಲಾ ನನಗೊತ್ತು. ಅವರು ಹಾಗೆ ಮಾಡುತ್ತಾರೆಂದು, ನೀವು ನಾಡಿನ ಮುಖ್ಯಮಂತ್ರಿ, ಸಂಸದೆಯನ್ನು ಅದೇ ಧಾಟಿಯಲ್ಲಿ ಟ್ರೋಲ್ ಮಾಡುತ್ತಿದ್ದೀರೆಂದು ಸಮರ್ಥನೆ ಕೊಡುವುದಾದರೆ, ನಿಮಗೂ, ಆ ವಿಕೃತಕಾಮಿ ಭಕ್ತರಿಗೂ ಯಾವುದೇ ವ್ಯತ್ಯಾಸವಿಲ್ಲ. ಭಕ್ತರನ್ನು ವಿರೋಧಿಸುವುದೆಂದರೆ, ನಾವೇ ಭಕ್ತರಾಗುವುದಲ್ಲ. ಯಡಿಯೂರಪ್ಪನವರನ್ನು ಟ್ರೋಲ್ ಮಾಡಲು ಸಾವಿರ ವಿಷಯಗಳಿವೆ. ಅದನ್ನು ಬಿಟ್ಟು ಆ ಹಿರಿಜೀವವನ್ನು ಈ ರೀತಿ ತೇಜೋವಧೆ ಮಾಡುವುದು ಅಕ್ಷಮ್ಯ ಅಪರಾಧ.

 

ಇನ್ನು ಇದನ್ನು ಶೂಟ್ ಮಾಡಿದ ಆ ವಿಕೃತಕಾಮಿ ಕ್ಯಾಮಾರಮ್ಯಾನ್ ಮೇಲೆ ಕೇಸ್ ಜಡಿದು, ಆರು ತಿಂಗಳು ಜೈಲಿಗಾಕಬೇಕು. ಬೇಕಾದರೇ ಬಿಜೆಪಿಯವರೇ ಮುಂದೆ ನಿಂತು ಆತನ ಮೇಲೆ ಕೇಸ್ ಹಾಕಿ. ನಾನು ಹಿಂದೆ ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ ಪ್ರಕರಣ ಹಾಗೂ ನಂತರ ತನ್ವೀರ್ ಸೇಠ್ ಪ್ರಕರಣದಲ್ಲಿ ಒಂದು ಮಾತು ಹೇಳಿದ್ದೆ. ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ ತಪ್ಪಲ್ಲ ಅಪರಾಧ. ಆದರೆ ಅದಕ್ಕಿಂತ ದೊಡ್ಡ ಅಪರಾಧ, ಶಾಸಕರ ಮೊಬೈಲ್‍ ಮೇಲೆ ಕ್ಯಾಮಾರ ಝೂಮ್ ಮಾಡಿ ಅವರೇನು ಮಾಡುತ್ತಿದ್ದಾರೆಂದು ಕ್ಯಾಮಾರಮ್ಯಾನ್ ನೋಡಿದ್ದು. ಅಂದು ಅವರಾಗಲಿ, ಆಮೇಲೆ ತನ್ವೀರ್ ಸೇಠ್ ಆಗಲಿ ಯಾವುದೇ ಅಧಿಕೃತ, ಕಾನ್ಫಿಡೆನ್ಷಿಯಲ್ ಕಡತವನ್ನೋ, ಫೊಟೋವನ್ನೋ ನೋಡುತ್ತಿದ್ದಿದ್ದರೇ? ಮೊಬೈಲ್ ಖಾಸಗಿ ಸ್ವತ್ತು. ನನ್ನ ಮೊಬೈಲ್‍ನಲ್ಲಿ ನಾನು ಏನು ಮಾಡುತ್ತೇನೆ, ಏನು ನೋಡುತ್ತೇನೆ, ಏನು ಸ್ಟೋರ್ ಮಾಡುತ್ತೇನೆ ಎನ್ನುವುದು ನನ್ನ ಆಯ್ಕೆ. ನಾನು ನನ್ನ ಮೊಬೈಲ್‍ನಲ್ಲಿ ಏನನ್ನೋ ನೋಡುತ್ತಿರುವಾಗ ಅದನ್ನು ಇಣುಕಿ ನೋಡುವ ಹಕ್ಕು ಯಾರಿಗೂ ಇಲ್ಲ. ಅಂಥದ್ದರಲ್ಲಿ ಮಂತ್ರಿ, ಶಾಸಕರು ತಮ್ಮ ಮೊಬೈಲ್‍ನಲ್ಲಿ ಏನು ನೋಡುತ್ತಾರೆಂದು ಇಣುಕಿ ನೋಡುವ ಸ್ವಾತಂತ್ರ್ಯ ಕ್ಯಾಮಾರ‍ಮ್ಯಾನ್‍ಗೆ ಯಾರು ಕೊಟ್ಟಿದ್ದು? ಒಂದುವೇಳೆ ಅವರು ಸರ್ಕಾರದ ಅಧಿಕೃತ ಹಾಗೂ ರಹಸ್ಯ ಕಡತವನ್ನೋ, ಮಾಹಿತಿಯನ್ನೋ ನೋಡುತ್ತಿದ್ದಿದ್ದರೇ? ಅದು ಸೋರಿಕೆಯಾಗುತ್ತಿತ್ತಲ್ವೇ? ನಮಗೆ ನೀಲಿ ಚಿತ್ರ ವೀಕ್ಷಣೆ ಮಾಡಿದ್ದನ್ನು ನೋಡಿ, ಚಾನೆ‍ಲ್‍ಗಳಲ್ಲಿ ತೋರಿಸಿದ್ದಾರೆ. ಆದರೆ ಅದೆಷ್ಟೋ ಬಾರಿ ಶಾಸಕ, ಮಂತ್ರಿ, ಮುಖ್ಯಮಂತ್ರಿಯವರ ಮೊಬೈಲ್‍ನಲ್ಲಿ ಹೀಗೆಯೇ ಝೂಮ್ ಮಾಡಿ, ಇಣುಕಿ ಅದೆಷ್ಟೋ ಖಾಸಗಿ/ಅಧಿಕೃತ ಮಾಹಿತಿಗಳನ್ನು ಈ ಕ್ಯಾಮಾರಮ್ಯಾನ್, ಅವರ ವಾಹಿನಿ ಕಲೆ ಹಾಕಿರಬಹುದಲ್ವೇ? ಅದು ತಪ್ಪಲ್ವೇ? ಅದಕ್ಕೇ ನಾನು ಇವತ್ತಿಗೂ ಹೇಳುವುದು ಅದನ್ನೇ. ಈ ಕ್ಯಾಮಾರಮ್ಯಾನ್ ಮೇಲೆ ಒಂದು ಕೇಸ್ ಹಾಕಿ, ಆತನನ್ನು ಕಂಬಿ ಹಿಂದೆ ಕಳುಹಿಸಿ. ಪತ್ರಕರ್ತರಿಗೆ ತಮ್ಮ ಕರ್ತವ್ಯದ ಜೊತೆಗೆ ಇತಿ-ಮಿತಿಗಳ ಪ್ರಜ್ಞೆನೂ ಇರಬೇಕು. ಇಂದು ಅವರ ವಿಕೃತಿಗೆ ನಿಮ್ಮ ಕೊಳಕು ಮನಸ್ಥಿತಿಯನ್ನು ಸೇರಿಸಿ ಟ್ರೋಲ್‍ಗಳ ಕೆಲಸ ಮಾಡುವವರೇ, ನಾಳೇ ಅದೇ ಕ್ಯಾಮಾರಮ್ಯಾನ್ ನಿಮ್ಮ ನಾಯಕನೊಬ್ಬನ ಇಂಥದ್ದೇ ಒಂದು ವಿಡಿಯೋ ಮಾಡಿದರೆ, ಆವಾಗ್ಲೂ ಇದೇ ರೀತಿ ಟ್ರೋಲ್ ಮಾಡುವಿರಾ?

Courtesy: Gladson Almeida Facebook Page 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99