
ಮೋಜು ಮಸ್ತಿಯಲ್ಲಿ ನಿರತ ತುಳು ಅಕಾಡೆಮಿ ಅಧ್ಯಕ್ಷರ ಫೋಟೋ ವೈರಲ್: ನೆಟ್ಟಿಗರ ತೀವ್ರ ಆಕ್ರೋಶ
Sunday, August 23, 2020
ಮಂಗಳೂರು:ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ್ ಕತ್ತಲ್ ಸರ್ ರವರ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿರುವ ಅವರ ಖಾಸಗಿ ಬದುಕಿನ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರ ಜೊತೆ ಮಿನಿ ಜಲಪಾತದಲ್ಲಿ ವಿಹರಿಸುವ ಅವರ ಫೋಟೋ ವೈರಲ್ ಆದ ಬಗ್ಗೆ ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ಫೋಟೋಗಳು ವಾಟ್ಸಾಪ್ ಫೇಸ್ ಬುಕ್ ನಲ್ಲಿ ಈ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಅವರು ತನ್ನ ಪತ್ನಿ ಮಗುವೊಂದಿಗೆ ಜಲಪಾತದ ಬಳಿ ಸ್ನಾನ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಈ ಫೋಟೋ ಇದೀಗ ಸಾಮಾಜಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದೈವ ಚಾಕರಿ ಮಾಡುವ ಪವಿತ್ರವಾದ ಜವಾಬ್ದಾರಿ ಹೊತ್ತಿರುವ ಗಣ್ಯ ವ್ಯಕ್ತಿ ಎಣಿಸಿಕೊಂಡಿರುವ ದಯಾನಂದ ಕತ್ತಲ್‌ಸಾರ್ ವರ್ತನೆ ಸರಿಯೇ? ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
"ದೈವಾರಾಧಕ, ದೈವ ಪರಿಚಾರಕ ದೈವ ದೇವರು ಎಂದು ಉಪನ್ಯಾಸ ನೀಡುವ ದಯಾನಂದ ಕತ್ತಲ್ ಸರ್ ಜಲಪಾತದ ಬಳಿ ಹೋಗಿ ಸಿನಿಮಾ ನಟರಿಗೆ ಕಮ್ಮಿ ಇಲ್ಲದಂತೆ ಫೋಸ್ ಕೊಟ್ಟಿದ್ದಾರೆ. ಈ ರೀತಿ ಮಾಡಿದರೆ ಅನ್ಯ ಧರ್ಮದವರು ತಮಾಷೆ ಮಾಡದೇ ಇರುತ್ತಾರೆಯೇ? ಈ ರೀತಿ ಖಾಸಗಿ ಫೋಟೋ ಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವ ಅವಶ್ಯಕತೆ ಏನಿತ್ತು?" ಎಂದು ಪ್ರಶ್ನಿಸುತ್ತಿದ್ದಾರೆ.
"ತುಳುನಾಡಿನಲ್ಲಿ ದೈವಾರಾಧಕನೊಬ್ಬ ಕೈಗೆ ಬಳೆ ಹಾಕಿದರೆ ಅದಕ್ಕೊಂದು ದೈವಿಕ ಬದ್ಧತೆ ಇದೆ. ಅವರು ಒಂದು ಧಾರ್ಮಿಕ ಕಟ್ಟಳೆಗೆ ಒಳಗಾಗುತ್ತಾರೆ. ಅಂಥವರು ನುಡಿಕೊಟ್ಟರೆ (ದೈವದ ಮಾತು ಎಂದೇ ಪ್ರತೀತಿ) ಅದು ಸತ್ಯವಾಗುತ್ತದೆ ಎಂಬ ನಂಬಿಕೆ ತುಳುನಾಡಿನಲ್ಲಿದೆ. ಆದರೆ ಕತ್ತಲ್ ಸರ್ ಈ ವರ್ತನೆ ಎಷ್ಟರ ಮಟ್ಟಿಗೆ ಸರಿ? ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಲು ಇವರು ಯೋಗ್ಯರೇ?" ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಇಂತಹವರು ಅದು ಹೇಗೆ ನಿಷ್ಠೆಯಲ್ಲಿ ದೈವದ ನುಡಿ ಕೊಡಲು ಸಾಧ್ಯ? ಕತ್ತಲ್ ಸರ್ ಕೈ ಗೆ ಹಾಕಿರುವ ಬಳೆ ತೆಗೆದು ಕ್ಷಮೆ ಯಾಚಿಸಬೇಕು ಎಂದು ತುಳುನಾಡಿನ ಮಂದಿ ಆಕ್ರೋಶ ವ್ಯಕ್ತ ಪಡಿಸತ್ತಿರುವ ಸಂದೇಶಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಲ ವಾರಗಳ ಹಿಂದೆ ಅಕಾಡೆಮಿಯಲ್ಲಿ ಅಧ್ಯಕ್ಷರ ನೆಲೆಯಲ್ಲಿ ತುಳು ಅಕಾಡೆಮಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಅವರ ಹೊರಡಿಸಿರುವ ಆದೇಶವೂ ಬಿಸಿ ಬಿಸಿ ಚರ್ಚೆಯಾಗಿತ್ತು.
ಒಟ್ಟಿನಲ್ಲಿ ದಯಾನಂದ ಕತ್ತಲ್‌ಸಾರ್ ಭಾರೀ ಸುದ್ದಿಯಲ್ಲಿದ್ದಾರೆ ಎಂಬುದಂತೂ ಸತ್ಯ.