-->

ಕೊವಿಡ್-19 ವಿರುದ್ದದ ಹೋರಾಟದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ:ಉ.ಕ  ಡಿ ಸಿ  ಡಾ. ಹರೀಶಕುಮಾರ್.ಕೆ

ಕೊವಿಡ್-19 ವಿರುದ್ದದ ಹೋರಾಟದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ:ಉ.ಕ ಡಿ ಸಿ ಡಾ. ಹರೀಶಕುಮಾರ್.ಕೆ



 ಕಾರವಾರ :   ಜಿಲ್ಲೆಯಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದ್ದು, ಆರೋಗ್ಯ ಇಲಾಖೆ ಕಾಲ ಕಾಲಕ್ಕೆ ನೀಡುವ ಮಾರ್ಗಸೂಚಿಯನ್ನು ಚಾಚೂ ತಪ್ಪದೇ ಪಾಲಿಸಿ ‘ ಉತ್ತರ ಕನ್ನಡ ಜಿಲ್ಲೆಯನ್ನು ಕರೋನಾ ಮುಕ್ತ’  ಜಿಲ್ಲೆಯನ್ನಾಗಿಸುವ ಅಭಿಯಾನದಲ್ಲಿ ಸಹಕರಿಸುವಂತೆ ಜಿಲ್ಲೆಯ ಪ್ರಜ್ಞಾವಂತ ನಾಗರೀಕರಲ್ಲಿ ಜಿಲ್ಲಾಧಿಕಾರಿ ಡಾ.  ಹರೀಶ ಕುಮಾರ ಕೆ ಅವರು  ಕೋರಿಕೊಂಡಿರುತ್ತಾರೆ.  
   ಜಿಲ್ಲೆಯ ಒಟ್ಟೂ ಸೋಂಕಿತರಲ್ಲಿ 75%ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು 24 ದಿವಸಗಳು ಬೇಕಾಗಿರುವದು ಒಳ್ಳೆಯ ಬೆಳವಣಿಗೆಯಾಗಿದೆ. ಮರಣ ಪ್ರಮಾಣ ಕೇವಲ 1% ಕ್ಕಿಂತಲೂ ಕಡಿಮೆಯಾಗಿದೆ. 6579 ಜನರು ಸಕ್ರಿಯ ಕ್ವಾರೆಂಟೈನ್ ನಲ್ಲಿದ್ದುಪಾಸಿಟೀವ್ ರೇಟ್ 6% ಕ್ಕಿಂತಲೂ ಕಡಿಮೆ ಇದೆ. ಪ್ರತಿ ಒಬ್ಬ ಸೋಂಕಿತರಿಗೂ 10 ಜನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸುತ್ತಿದ್ದು.ಪ್ರತಿ ದಿನ 1600 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಶೇಕಡಾ 91 ರಷ್ಟು ಸೋಂಕಿತರಲ್ಲಿ ಮಾತ್ರ ರೋಗ ಲಕ್ಷಣಗಳೇ ಇಲ್ಲವಾಗಿದ್ದು, ಕೇವಲ 9% ಸೋಂಕಿತರಲ್ಲಿ ಮಾತ್ರ ರೋಗಲಕ್ಷಣಗಳು ಕಂಡು ಬರುತ್ತಿದೆ. ಸಕ್ರಿಯ ಸೋಂಕಿತರು 903 ಇದ್ದು.  ಒಟ್ಟಾರೆ ಸೋಂಕಿತರಲ್ಲಿ 5 ವರ್ಷಕ್ಕಿಂತ ಕೆಳ ಹರೆಯದವರು 102 ಜನ, 6 ರಿಂದ 10 ವರ್ಷದವರು 146 ಜನ, 11 ರಿಂದ 20 ವರ್ಷದವರು 425 ಜನ, 21 ರಿಂದ 30 ವರ್ಷದವರು 858 ಜನ, 31 ರಿಂದ 40 ವರ್ಷದವರು 676 ಜನ 41 ರಿಂದ 50 ವರ್ಷದವರು 579 ಜನ , 51 ರಿಂದ 60 ವರ್ಷದವರು 417 ಜನ ಮತ್ತು 60 ವರ್ಷಕ್ಕಂತ ಮೇಲ್ಪಟ್ಟ ಸೋಂಕಿತರು 358 ಜನರಿರುತ್ತಾರೆ. ರೋಗ ಲಕ್ಷಣ ರಹಿತ ಸೋಂಕಿತರಲ್ಲಿ ಪಾಸಿಟಿವಿಟಿ ರೇಟ್ 7% ಇದ್ದು ರೋಗ ಲಕ್ಷಣ ಇರುವ ಸೋಂಕಿತರಲ್ಲಿ  ಪಾಸಿಟಿವಿಟಿ ರೇಟ್ 16 % ಇರುತ್ತದೆ. ಒಂದು ಮಿಲಿಯನ್ ಜನರಲ್ಲಿ 9291 ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದುಈವರೆಗೂ 50 ಸಾವಿರಕ್ಕಿಂತಲೂ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗಿರುತ್ತದೆ.
   ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವದು, ಪ್ರತಿ ಸೋಂಕಿತರ ಸಂಪರ್ಕಕ್ಕೆ ಬಂದವರನ್ನೆಲ್ಲಾ ಪರೀಕ್ಷೆಗೆ ಒಳಪಡಿಸುವದು ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆ ಕಲ್ಪಿಸುವದರಿಂದ ಈ ಮಹಾ ಮಾರಿಯನ್ನು ಆದಷ್ಟು ಬೇಗನೆ ನಿಯಂತ್ರಣಕ್ಕೆ ತರಬಹುದಾಗಿರುತ್ತದೆ.
   ಆದುದರಿಂದ ಸರ್ಕಾರ ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆಯ ಪ್ರಮಾಣ ಹೆಚ್ಚಿಸಲು ಇನ್ನೊಂದು ಹೊಸ ಯಂತ್ರವನ್ನು (RTPCR) ಮುಂದಿನ ಹದಿನೈದು ದಿವಸಗಳಲ್ಲಿ ಒದಗಿಸಲಿದೆ. ಇದರಿಂದಾಗಿ ಪ್ರತಿ ದಿನ 1000 RTPCR ಪರೀಕ್ಷೆಗಳನ್ನು ಮಾಡಬಹುದಾಗಿರುತ್ತದೆ. ಅಲ್ಲದೇ ಪ್ರತಿ ದಿನ 1000 Rapid Antigen Test ನಡೆಸಲು ಸರಕಾರವು KIT ಗಳನ್ನು ಒದಗಿಸುತ್ತಿದೆ.ಆದ್ದರಿಂದ ಪ್ರತಿ ದಿನ 2000 ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.ಇದರಿಂದ ಸೋಂಕಿತರನ್ನು ಬಹು ಬೇಗನೆ ಪತ್ತೆ ಹಚ್ಚಿ ರೋಗದ ಹರಡುವಿಕೆಯನ್ನು ತಡೆಯಬಹುದಾಗಿದೆ. ಈ ವಿಷಯದಲ್ಲಿ ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಸಹನೆಯಿಂದ ಸಹಕರಿಸಲು ಕೋರಿದೆ. 
   ಕೊರೋನಾ ಸಾಂಕ್ರಾಮಿಕ ರೋಗ ಪೀಡಿತರಿಗೆ ಉತ್ತಮ ರೀತಿಯ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ದವಾಗಿದೆ. ಈ ತಿಂಗಳ  ಅಂತ್ಯದ ಒಳಗೆ ಪ್ರತಿ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ 50 ಬೆಡ್ ಗಳಿಗೆ Oxygen Supply ವ್ಯವಸ್ಥೆ ಕಲ್ಪಿಸಲಾಗುವದು. ಈಗಾಗಲೇ ಕಾರವಾರ ವೈದ್ಯಕೀಯ ಕಾಲೇಜಿಗೆ 30 Ventilators ಒದಗಿಸಲಾಗಿರುತ್ತದೆ. 10 High flow nasal Cannula (HPNC) ಒದಗಿಸಲಾಗಿದ್ದು, ಎಲ್ಲಾ ರೀತಿಯ ಆಧುನಿಕ ಔಷಧಿಗಳೊಂದಿಗೆ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಕಾರವಾರ ವೈದ್ಯಕೀಯ ಕಾಲೇಜು ಕಟಿಬದ್ದವಾಗಿರುತ್ತದೆ.
   ಈ ಎಲ್ಲಾ ಸಾಧನೆಗೆ ಮುಖ್ಯ ಕಾರಣ ಉತ್ತರ ಕನ್ನಡ ಜಿಲ್ಲೆಯ ನಾಗರೀಕರ ಪ್ರಬುದ್ದ ವರ್ತನೆ , ಆರೋಗ್ಯ ಇಲಾಖೆ ಇಲಾಖೆ ನೀಡಿದ ಎಲ್ಲಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ರೋಗ ನಿಯಂತ್ರಣಕ್ಕೆ ಸಹಕರಿಸಿರುವದು. ಈಗ ಕರೋನಾ ವಿರುದ್ದದ ಯುದ್ದ ನಿರ್ಣಾಯಕ ಹಂತ ತಲುಪಿದ್ದು, ಹತೋಟಿಯಲ್ಲಿರುವ ಸಾಂಕ್ರಾಮಿಕ ರೋಗವನ್ನು ಪೂರ್ತಿಯಾಗಿ ನಿಯಂತ್ರಣಕ್ಕೆ ತರಲು ಹೆಚ್ಚು ಹೆಚ್ಚು ತಪಾಸಣೆಗಳನ್ನು ನಡೆಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಜನರ ಸಹಕಾರ ಬಹು ಮುಖ್ಯವಾಗಿದ್ದು, ದೇಶದಲ್ಲಿ ಮಾದರಿಯಾಗಿ ನಮ್ಮ ಸಾಮಾಜಿಕ ಬದ್ದತೆ ತೋರಲು ಒಳ್ಳೆಯ ಅವಕಾಶ ಒದಗಿ ಬಂದಿದೆ. ಆದುದರಿಂದ ಸಾರ್ವಜನಿಕ ರ ಆರೋಗ್ಯದ ಹಿತದೃಷ್ಠಿಯಿಂದ ಆರೋಗ್ಯ  ಇಲಾಖೆ ನಡೆಸುವ ಈ ಅಭಿಯಾನದಲ್ಲಿ ಕೈ ಜೋಡಿಸಲು ಜಿಲ್ಲಾಧಿಕಾರಿ ಜಿಲ್ಲೆಯ ಪ್ರಬುದ್ದ ಜನರಲ್ಲಿ  ವಿನಂತಿಸಿರುತ್ತಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99