ಲಾಡ್ಜ್ ಬಾತ್ ರೂಂ ದೂಡಿದಾಗ ಬಯಲಾಯಿತು ಸೀಕ್ರೇಟ್; ಸೆಕ್ಸ್ ಜಾಲದ ಕರಾಮತ್ತು ಕಂಡು ದಂಗಾದ ಪೊಲೀಸರು
Saturday, August 22, 2020
(ಗಲ್ಫ್ ಕನ್ನಡಿಗ)ಕೊಯಮತ್ತೂರು; ಖಚಿತ ಮಾಹಿತಿಯ ಮೇಲೆ ಕೊಯಮುತ್ತೂರಿನ ಲಾಡ್ಜ್ ವೊಂದಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ಸೆಕ್ಸ್ ಜಾಲದ ಕರಾಮತ್ತು ಕಂಡು ದಂಗಾಗಿದ್ದಾರೆ.
(ಗಲ್ಫ್ ಕನ್ನಡಿಗ)ಯುವತಿಯೊಬ್ಬಳನ್ನು ಕೂಡಿ ಹಾಕಲಾಗಿದೆ ಎಂಬ ಮಾಹಿತಿ ಪಡೆದ ಕೊಯಮತ್ತೂರು ಪೊಲೀಸರು ಊಟಿ ರಸ್ತೆಯಲ್ಲಿ ಇರುವ ಶರಣ್ಯ ಲಾಡ್ಜ್ ಗೆ ದಾಳಿ ನಡೆಸಿದ್ದಾರೆ. ಲಾಡ್ಜ್ ನ ರೂಂ ಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇದೇ ವೇಳೆ ಬಾತ್ ರೂಂ ನಲ್ಲಿದ್ದ ಕನ್ನಡಿಯೊಂದು ಪೊಲೀಸರಿಗೆ ಸೆಕ್ಸ್ ಜಾಲವನ್ನು ಭೇಧಿಸಲು ಸಾಧ್ಯವಾಗಿದೆ.
(ಗಲ್ಫ್ ಕನ್ನಡಿಗ)ಬಾತ್ ರೂಂ ನಲ್ಲಿ ಇದ್ದ ಡ್ರೆಸ್ಸಿಂಗ್ ಕನ್ನಡಿ ಬಗ್ಗೆ ಅನುಮಾನ ತಾಳಿದ ಪೊಲೀಸರು ಅದನ್ನು ಕೈಯಿಂದ ದೂಡಿದ್ದಾರೆ. ಆಗ ಕಂಡದ್ದು ಅದರಾಚೆಗೆ ಇದ್ದ ಸೀಕ್ರೆಟ್ ರೂಂ. ಆ ರೂಮಿಗೆ ಹೋಗಲು ಕನ್ನಡಿ ಇದ್ದ ಕಿಟಕಿ ದಾರಿಯಾಗಿತ್ತು. ಅದರೊಳಗೆ ಒಂದು ಮಂಚ ಮತ್ತು ಹಾಸಿಗೆ ಮಾತ್ರವಿತ್ತು.ಅದರಲ್ಲಿ 22 ವರ್ಷದ ಯುವತಿಯೊಬ್ಬಳನ್ನು ಕೂಡಿ ಹಾಕಲಾಗಿತ್ತು. ಈ ಯುವತಿಯನ್ನು ಮೂರು ದಿನದ ಹಿಂದೆಯಷ್ಟೆ ಈ ಲಾಡ್ಜ್ ಗೆ ಕರೆ ತರಲಾಗಿತ್ತು. ಯುವತಿಯನ್ನು ರಕ್ಷಿಸಿದ ಪೊಲೀಸರು ಲಾಡ್ಜ್ ನಡೆಸುತ್ತಿದ್ದ ಮಹೇಂದ್ರನ್ (46) ಮತ್ತು ರೂಂ ಬಾಯ್ ಗಣೇಶನ್ (36) ಎಂಬಿಬ್ಬರನ್ನು ಬಂಧಿಸಿದ್ದಾರೆ. ಲಾಡ್ಜನ್ನು ಸೀಲ್ ಡೌನ್ ಮಾಡಲಾಗಿದೆ.
(ಗಲ್ಫ್ ಕನ್ನಡಿಗ)