ಸೆಕ್ಸ್ ವಿಡಿಯೋ ಕಳುಹಿಸಿದವನನ್ನು ಮನೆಗೆ ಕರೆದ ಯುವತಿ; ಮುಂದೇನಾಯಿತು ಗೊತ್ತಾ?
Saturday, August 15, 2020
(ಗಲ್ಫ್ ಕನ್ನಡಿಗ)ಚೆನ್ನೈ; ಮಹಿಳೆಯೊಬ್ಬರಿಗೆ ಸೆಕ್ಸ್ ವಿಡಿಯೋ ಕಳುಹಿಸಿ ಕೀಟಲೆ ಕೊಡುತ್ತಿದ್ದ ಯುವಕನನ್ನು ಮನೆಗೆ ಕರೆಸಿಕೊಂಡ ಮಹಿಳೆ ಸರಿಯಾದ ಪಾಠ ಕಳುಹಿಸಿದ್ದಾಳೆ.
(ಗಲ್ಫ್ ಕನ್ನಡಿಗ)ತಮಿಳುನಾಡಿನ ಚೆನ್ನೈ ನಲ್ಲಿ ಈ ಘಟನೆ ನಡೆದಿದೆ. ವಿಮಲ್ ರಾಜ್ ಎಂಬ 29 ವರ್ಷದ ಯುವಕ ಮಹಿಳೆಯೊಬ್ಬರಿಗೆ ಸೆಕ್ಸ್ ವಿಡಿಯೋ ಕಳುಹಿಸಿದ್ದ. ಇಕಾಮರ್ಸ್ ಕಂಪೆನಿಯ ಉದ್ಯೋಗಿಯಾಗಿದ್ದ ಈತ ಮಹಿಳೆಗೆ ಕೀಟಲೆ ನೀಡುತ್ತಿದ್ದ.
(ಗಲ್ಫ್ ಕನ್ನಡಿಗ)ಈ ಮಹಿಳೆ ಗಂಡನೊಂದಿಗೆ ಜಗಳವಾಡಿ ತವರು ಮನೆಗೆ ಬಂದಿದ್ದಳು. ಈಕೆಗೆ ಆಗಷ್ಟ್ 4 ರಂದು ಈತ ಮೊಬೈಲ್ ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಈತನ ಅಶ್ಲೀಲ ಮಾತುಗಳಿಗೆ ಮಹಿಳೆ ಕರೆ ಕಟ್ ಮಾಡಿದ್ದಾಳೆ. ಆ ಬಳಿಕ ಮಹಿಳೆಗೆ ಬೇರೆ ಬೇರೆ ನಂಬರ್ ನಿಂದ ಈತ ಕರೆ ಮಾಡಿ ಪೀಡಿಸಿದ್ದಾನೆ. ಆಗಷ್ಟ್ 8 ರಂದು ಮಹಿಳೆಯ ವಾಟ್ಸಪ್ ಗೆ ಪೋರ್ನ್ ವಿಡಿಯೋ ಕಳುಹಿಸಿದ್ದಾನೆ.
(ಗಲ್ಫ್ ಕನ್ನಡಿಗ)ಈ ಬಗ್ಗೆ ಮನೆಯವರೊಂದಿಗೆ ಚರ್ಚಿಸಿದ ಮಹಿಳೆ ಆತನನ್ನು ಉಪಾಯವಾಗಿ ಹಿಡಿಯುವ ಪ್ಲಾನ್ ಮಾಡಿದ್ದಾರೆ. ಅದರಂತೆ ಮಹಿಳೆ ಪೋರ್ನ್ ವಿಡಿಯೋ ಕಳುಹಿಸಿದ ಯುವಕನಿಗೆ ಪೋನ್ ಮಾಡಿ ಮನೆಗೆ ಬಾ ಎಂದು ಕರೆದಿದ್ದಾಳೆ.
(ಗಲ್ಫ್ ಕನ್ನಡಿಗ)ಇದಕ್ಕೆ ಯುವಕ ಒಪ್ಪಿ ಮನೆಗೆ ಬಂದಿದ್ದಾನೆ. ಮೊದಲೇ ಯೋಜಿಸಿದಂತೆ ಮನೆಯ ಇತರರು ಮನೆಯಲ್ಲಿ ಅಡಗಿ ಕೂತಿದ್ದಾರೆ. ಆತ ಮನೆಯೊಳಗೆ ಬರುತ್ತಿದ್ದಂತೆ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
(ಗಲ್ಫ್ ಕನ್ನಡಿಗ)ಈತ ಮಹಿಳೆಯರ ನಂಬರ್ ಪಡೆದು ಅವರಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ, ವಿಡಿಯೊ ಕಳುಹಿಸುತ್ತಿದ್ದ ಎಂದು ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
(ಗಲ್ಫ್ ಕನ್ನಡಿಗ)ಆರೋಪಿಯ ವಿರುದ್ದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಡಿ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
(ಗಲ್ಫ್ ಕನ್ನಡಿಗ)