ಅಮ್ಮ ಮಾಡಿಕೊಟ್ಟ ಪತ್ರೊಡೆ ತಿಂದೆ: ಬಾಲಿವುಡ್ ಚೆಲುವೆ ಕಂಗಾನ ಅಚ್ಚರಿ ಟ್ವೀಟ್
(ಗಲ್ಪ್ ಕನ್ನಡಿಗ) ಮುಂಬಯಿ: ಬಾಲಿವುಡ್ ನಟಿ ಕಂಗಾನ ಮಾಡಿದ ಟ್ವೀಟ್ ವೊಂದು ಕರಾವಳಿಗರ ಅಚ್ಚರಿಗೆ ಕಾರಣರಾಗಿದ್ದಾರೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ) ಆಗಷ್ಟ್ 13 ರಂದು ಕಂಗಾನ ರಾವಟ್ ಅಫೀಸಿಯಲ್ ಪೇಜ್ ನಿಂದ ಮಾಡಿದ ಟ್ವೀಟ್ ಕುಡ್ಲದ ಜನರಲ್ಲಿ ಅಚ್ಚರಿ ಮೂಡಿಸಿದೆ. ಅಮ್ಮ ಇಂದು ನನ್ನಿಷ್ಟ ಪತ್ರೊಡೆ ಮಾಡಿಕೊಟ್ಟರು. ಪತ್ರೊಡೆಯನ್ನು ಕೆಸುವಿನ ಎಲೆ ಮತ್ತು ತುಳಸಿ ಎಲೆಯಲ್ಲಿ ಮಾಡಿ ಕೊಟ್ಟರು. ಇದನ್ನು ತುಪ್ಪದೊಂದಿಗೆ ಹುರಿದು ತಿಂದಾಗ ಅದರ ರುಚಿ ಅದ್ಬುತವಾಗಿರುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.
(ಗಲ್ಪ್ ಕನ್ನಡಿಗ)ಕೆಸುವಿನ ಎಲೆಯಿಂದ ಮಾಡುವ ಪತ್ರೊಡೆ ಕರಾವಳಿಯ ಫೇಮಸ್ ಫುಡ್. ಪತ್ರೊಡೆಯನ್ನು ಮಳೆಗಾಲದಲ್ಲಿ ಕರಾವಳಿಗರು ಕೆಲವು ಬಾರಿ ಮಾಡಿ ತಿನ್ನುತ್ತಾರೆ. ಕರಾವಳಿಯ ಜನರು ಬೇರೆ ಕಡೆ ಇದ್ದಾಗ ಕೆಸುವಿನ ಎಎ ಸಿಕ್ಕರೆ ಪ್ತರೋಡೆ ಮಾಡಿ ತಿನ್ನುತ್ತಾರೆ. ಆದರೆ ಬಾಲಿವುಡ್ ನಟಿ ಬರೆದುಕೊಂಡಂತೆ ಪತ್ರೊಡೆ ಅವರಿಗಿಷ್ಟವಾದದ್ದು ಹೇಗೆ?. ಅವರ ಕುಟುಂಬಕ್ಕೆ ಪತ್ರೊಡೆ ಪರಿಯ ಹೇಗೆ ಎಂಬುದು ಅಚ್ಚರಿಗೆ ಕಾರಣವಾಗಿದೆ.