ಕಳ್ಳತನದ ಆರೋಪ: ಕಲ್ಲಡ್ಕದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ತಂಡ
Saturday, August 22, 2020
(ಗಲ್ಫ್ ಕನ್ನಡಿಗ)ಮಂಗಳೂರು;ಯುವಕನೊಬ್ಬ
ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಆತನ ಮೇಲೆ ತಂಡವೊಂದು ಹಲ್ಲೆ ನಡೆಸಿದೆ.
(ಗಲ್ಫ್ ಕನ್ನಡಿಗ)ಯುವಕನ ಮೇಲೆ ಹಲ್ಲೆ ನಡೆಸಿದ್ದ ತಂಡದ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)ಕಲ್ಲಡ್ಕದ ಪಳನೀರು ಬಳಿ ಈ ಘಟನೆ ನಡೆದಿದ್ದು ಯುವಕನಿಗೆ ಹಲ್ಲೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
(ಗಲ್ಫ್ ಕನ್ನಡಿಗ)ಘಟನೆ ಹಿನ್ನೆಲೆಯಲ್ಲಿ ಬಾಳ್ತಿಲ ಗ್ರಾಮ ನಿವಾಸಿ ಉದಯ್ ಎಂಬುವರು ವೀರಕಂಭ ನಿವಾಸಿ ಶ್ರೀನಿವಾಸ, ಕಲ್ಲಡ್ಕ ನಿವಾಸಿ ಪ್ರಶಾಂತ್ ಹಾಗೂ ಇತರರ ತಂಡ ಕೈ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
(ಗಲ್ಫ್ ಕನ್ನಡಿಗ)ಯುವಕ ಸಮೀಪದ ಮನೆಯೊಂದರಲ್ಲಿ ಮೊಬೈಲ್ ಪೋನ್ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಯುವಕನ ಮೇಲೆ ಹಲ್ಲೆ ನಡೆಸಿದ್ದು ಇದರ ವಿಡಿಯೋ ವೈರಲ್ ಆಗಿತ್ತು.
(ಗಲ್ಫ್ ಕನ್ನಡಿಗ)