ಆದಿತ್ಯರಾವ್ ನಂತೆ ಫೇಮಸ್ ಆಗಲು ಏರ್ ಪೋರ್ಟ್ ಗೆ ಬಾಂಬ್ ಕರೆ ಮಾಡಿದ ಆರೋಪಿ: ಪೊಲೀಸ್ ಕಮೀಷನರ್ (video)
Friday, August 21, 2020
(ಗಲ್ಫ್ ಕನ್ನಡಿಗ)ಮಂಗಳೂರು:ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಆದಿತ್ಯ ರಾವ್ ನಂತೆ ಫೇಮಸ್ ಆಗಲು ಆರೋಪಿ ವಸಂತ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿರುವುದಾಗಿ ಸುಳ್ಳು ಕರೆ ಮಾಡಿದ್ದ ಎಂದು ಮಂಗಳೂರು ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್ ವಿಕಾಸ್ ತಿಳಿಸಿದ್ದಾರೆ.
(ಗಲ್ಫ್ ಕನ್ನಡಿಗ)ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುದ್ರಾಡಿ ನಿವಾಸಿ
ವಸಂತ ಕೃಷ್ಣ ಶೇರಿಗಾರ್(33) ಈ ಕೃತ್ಯ ಎಸಗಿದ್ದಾನೆ .ಈ ಹಿಂದೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಘಟನೆಯಿಂದ ಪ್ರೇರಿತನಾಗಿ ತಾನೂ ಕೂಡಾ ಪ್ರಚಾರ ಪಡೆಯಬೇಕೆಂಬ ಉದ್ದೇಶದಿಂದ ಹುಸಿಬಾಂಬ್ ಕರೆ ಮಾಡಿರುವುದಾಗಿ ಆರೋಪಿ ವಿಚಾರಣೆಯ ವೇಳೆ ಹೇಳಿದ್ದಾಗಿ ತಿಳಿಸಿದರು.
(ಗಲ್ಫ್ ಕನ್ನಡಿಗ)ಉಡುಪಿಯ ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ವಸಂತ ಕೃಷ್ಣ ಗೂಗಲ್ ಮೂಲಕ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರ ಮೊಬೈಲ್ ಸಂಖ್ಯೆಯನ್ನು ಪಡೆದು ಆ.19ರಂದು 1:05ರ ಸುಮಾರಿಗೆ ಈ ಕರೆ ಮಾಡಿದ್ದಾನೆ. ಅಂದೇ ಸಂಜೆ ಕರೆ ಮಾಡಿರುವ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಉಡುಪಿ ಪೊಲೀಸರ ಸಹಾಯದಿಂದ ಮಂಗಳೂರು ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದವರು ಹೇಳಿದರು.
(ಗಲ್ಫ್ ಕನ್ನಡಿಗ)