ನಟ ವಿಜಯ ರಾಘವೇಂದ್ರ ಪೆಟ್ರೋಲ್ ಹಾಕಲು ಬಂದಾಗ ನಡೆಯಿತು ಎಡವಟ್ಟು; ನಟನನ್ನು ನೋಡಿದ ಖುಷಿಯಲ್ಲಿ ಪೆಟ್ರೋಲ್ ಬದಲಿಗೆ ಹಾಕಿದ್ದು.....!


(ಗಲ್ಫ್ ಕನ್ನಡಿಗ)ಶಿವಮೊಗ್ಗ; ಶಿವಮೊಗ್ಗ ಜಿಲ್ಲಾ ಪ್ರವಾಸಕ್ಕೆ  ನಟ ವಿಜಯರಾಘವೇಂದ್ರ ಅವರು ಕಾರಿಗೆ  ಪೆಟ್ರೋಲ್  ಹಾಕಲು ಹೋದಾಗ ಪೆಟ್ರೋಲ್ ಬಂಕ್ ಸಿಬ್ಬಂದಿ ಎಡವಟ್ಟಿನಿಂದ ಪೇಚಿಗೆ ಸಿಲುಕಿದ್ದಾರೆ.

(ಗಲ್ಫ್ ಕನ್ನಡಿಗ)ವಿಜಯರಾಘವೇಂದ್ರ ಅವರು ಕುಟುಂಬದೊಂದಿಗೆ  ಶಿವಮೊಗ್ಗ ಕ್ಕೆ ಬಂದವರು ಮರಳಿ ಬೆಂಗಳೂರಿಗೆ ಹೊರಡುವ ವೇಳೆ ನಗರದ ಪೆಟ್ರೋಲ್ ಬಂಕ್ ಗೆ ಬಂದಿದ್ದಾರೆ. 

(ಗಲ್ಫ್ ಕನ್ನಡಿಗ)ಪೆಟ್ರೋಲ್ ಬಂಕ್ ಸಿಬ್ಬಂದಿ ನೆಚ್ಚಿನ ನಟ ಪೆಟ್ರೋಲ್ ಹಾಕಲು ಬಂದದನ್ನು ನೋಡಿ ಖುಷಿಯಿಂದ ಮೈಮರೆತಿದ್ದಾರೆ. ಕಾರಿಗೆ ಪೆಟ್ರೋಲ್ ಹಾಕುವ ಬದಲಿಗೆ ಡೀಸೆಲ್‌ ಹಾಕಿದ್ದಾರೆ. ನಂತರ ಎಚ್ಚೆತ್ತ ಬಂಕ್ ಸಿಬ್ಬಂದಿ ತಮ್ಮ ಎಡವಟ್ಟಿಗೆ ಕ್ಷಮೆ ಯಾಚಿಸಿದ್ದಾರೆ.

(ಗಲ್ಫ್ ಕನ್ನಡಿಗ)ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿರುವುದರಿಂದ ಕಾರನ್ನು ಬೆಂಗಳೂರಿಗೆ ಲಾರಿ ಮೂಲಕ ಸರ್ವೀಸ್ ಗೆ ಕಳುಹಿಸಲಾಗಿದೆ. ನಟ ವಿಜಯರಾಘವೇಂದ್ರ ಅವರು ಮತ್ತೊಂದು ಕಾರಿನ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.

(ಗಲ್ಫ್ ಕನ್ನಡಿಗ)