
ಕಡಲ್ಕೊರೆತ ವೀಕ್ಷಿಸಲು ಬಂದ ಗೃಹ ಸಚಿವರಿಗೆ ಸಮುದ್ರ ರಾಜ ಕೊಟ್ಟ ಶಾಕ್! - ಇದೊಂದು ಚಪ್ಪಲಿ ಕಥೆ (video)
Tuesday, August 11, 2020
(ಗಲ್ಫ್ ಕನ್ನಡಿಗ)ಉಡುಪಿ; ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಇಂದು ಉಡುಪಿ ಜಿಲ್ಲೆಗೆ ಆಗಮಿಸಿದ ವೇಳೆ ಸಮುದ್ರತೀರದಲ್ಲೊಂದ ವಿದ್ಯಮಾನ ನಡೆಯಿತು.
(ಗಲ್ಫ್ ಕನ್ನಡಿಗ)ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಉಡುಪಿ ಜಿಲ್ಲೆಯ ಪಡುಬಿದ್ರೆಗೆ ಕಡಲ್ಕೊರೆತ ವೀಕ್ಷಣೆ ಮಾಡಲು ತೆರಳಿದ್ದರು. ಈ ವೇಳೆ ಅವರ ಚಪ್ಪಲಿಯನ್ನು ಸಮುದ್ರದ ಅಲೆ ಎಳೆದೊಯ್ದಿದೆ.
(ಗಲ್ಫ್ ಕನ್ನಡಿಗ)ಕಡಲತೀರದಲ್ಲಿ ಕಡಲ್ಕೊರೆತ ವೀಕ್ಷಿಸುವ ವೇಳೆ ದೊಡ್ಡ ಅಲೆಯೊಂದು ಎರಗಿ ಬಂದಿದೆ. ಕಡಲ ಅಲೆಯನ್ನು ತಪ್ಪಿಸಲು ಸಚಿವರು ಈಚೆ ಬಂದರಾದೂ ಅವರ ಚಪ್ಪಲಿ ಕಾಲಿಂದ ತಪ್ಪಿ ಸಮುದ್ರಕ್ಕೆ ಬಿದ್ದಿದೆ. ಸಮುದ್ರಕ್ಕೆ ಬಿದ್ದ ಚಪ್ಪಲಿಯನ್ನು ಅಲೆ ಎಳೆದುಕೊಂಡು ಹೋಗಿದೆ. ಒಂದೆಡೆ ಅಲೆಯ ಸೆಳೆತ ಮತ್ತೊಂದೆಡೆ ಚಪ್ಪಲಿ ಸಮುದ್ರಪಾಲಾದಾಗ ಸಚಿವರು ಸ್ವಲ್ಪ ಹೊತ್ತು ಕಂಗಲಾದರು. ಸಮುದ್ರದಲ್ಲಿ ಹೀಗೆ ಹೋಗುವ ಚಪ್ಪಲಿ ಮತ್ತೆ ದಡಕ್ಕೆ ಬರುತ್ತದೆ. ಅದೇ ರೀತಿಯಲ್ಲಿ ಮತ್ತೊಂದು ಅಲೆಗೆ ಚಪ್ಪಲಿ ದಡಕ್ಕೆ ಬಂದಿದೆ.
(ಗಲ್ಫ್ ಕನ್ನಡಿಗ) ಹೀಗೆ ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವರಿಗೆ ಸಮುದ್ರ ಸಣ್ಣದೊಂದು ಶಾಕ್ ನೀಡಿದೆ.