
BSNL ನೌಕರರು ದೇಶದ್ರೋಹಿಗಳು; ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಅನಂತಕುಮಾರ್ ಹೆಗ್ಡೆ (video)
Tuesday, August 11, 2020
(ಗಲ್ಫ್ ಕನ್ನಡಿಗ)ಕಾರವಾರ; ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುವ ಬಿಜೆಪಿ ಮುಖಂಡ, ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗ್ಡೆ ಅವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ.
(ಗಲ್ಫ್ ಕನ್ನಡಿಗ)ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ದೇಶದ್ರೋಹಿಗಳೆ ತುಂಬಿಕೊಂಡಿದ್ದು ಅದನ್ನು ನಮ್ಮ ಸರಕಾರದಿಂದಲೂ ಸರಿಪಡಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
(ಗಲ್ಫ್ ಕನ್ನಡಿಗ) ಮುಂದಿನ ದಿನಗಳಲ್ಲಿ ಬಿಎಸ್ಎನ್ಎಲ್ ಸಂಪೂರ್ಣ ಖಾಸಗೀಕರಣವಾಗಲಿದೆ. ಬಿಎಸ್ಎನ್ಎಲ್ ದೇಶಕ್ಕೆ ಕಳಂಕವಾಗಿದೆ.ಬಿಎಸ್ಎನ್ಎಲ್ ನ ಜಾಗಕ್ಕೆ ಖಾಸಗಿಯವರು ಬರಲಿದ್ದಾರೆ. ಸಾಕಷ್ಟು ಪ್ರಯತ್ನಿಸಿದರೂ ನಮ್ಮ ಸರಕಾರದಿಂದಲೂ ಅದನ್ನು ಸರಿಪಡಿಸಲು ಆಗಿಲ್ಲ. ಸರಕಾರ ಹಣ ತಂತ್ರಜ್ಞಾನ ಎಲ್ಲವನ್ನೂ ಕೊಟ್ಟರೂ ಕೂಡ ನೌಕರರು ಕೆಲಸ ಮಾಡುತ್ತಿಲ್ಲ. ಈಗಾಗಲೇ 85 ಸಾವಿರ ಸಿಬ್ಬಂದಿಗಳನ್ನು ಮನೆಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರು ಮನೆಗೆ ತೆರಳಲಿದ್ದಾರೆ. ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದಿದ್ದಾರೆ.
(ಗಲ್ಫ್ ಕನ್ನಡಿಗ)