ಅನಂತಕುಮಾರ್ ಹೆಗ್ಡೆ ಭಾರತೀಯನಾಗಲೂ ಯೋಗ್ಯರಲ್ಲ; ಐವನ್‌ಡಿಸೋಜ ತಿರುಗೇಟು
Tuesday, August 11, 2020
(ಗಲ್ಫ್ ಕನ್ನಡಿಗ)ಮಂಗಳೂರು; ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಭಾರತೀಯನಾಗಲೂ ಯೋಗ್ಯರಲ್ಲ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ತಿರುಗೇಟು ನೀಡಿದ್ದಾರೆ.
(ಗಲ್ಫ್ ಕನ್ನಡಿಗ)ಬಿಎಸ್ಎನ್ ಎಲ್ ನಲ್ಲಿ ದೇಶದ್ರೋಹಿಗಳೆ ತುಂಬಿದ್ದಾರೆ ಎಂದು ಅನಂತಕುಮಾರ್ ಹೆಗ್ಡೆ ನೀಡಿರುವ ಹೇಳಿಕೆ ಖಂಡಿಸಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
(ಗಲ್ಫ್ ಕನ್ನಡಿಗ)"ದೇಶದ್ರೋಹಿಗಳನ್ನು ಪತ್ತೆ ಹಚ್ಚುವ ಅನಂತ್ ಕುಮಾರ್ ಹೆಗ್ಡೆಯವರೇ ನೀವು ಸಂಸದರಾಗಲು ಅಲ್ಲ ಭಾರತೀಯನಾಗಲು ಕೂಡ ಯೋಗ್ಯರಲ್ಲ.BSNL ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಯಾವುದೇ ಕ್ರಮಕೈಗೊಳ್ಳದೇ ಇದೀಗ ಬಡಪಾಯಿ BSNL ನೌಕರರಿಗೆ ದೇಶದ್ರೋಹಿ ಪಟ್ಟವನ್ನು ಕಟ್ಟುತ್ತೀರಲ್ವ? ನಾಚಿಕೆಯಾಗಬೇಕು ಬಿ.ಜೆ.ಪಿ.ಯವರಿಗೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
(ಗಲ್ಫ್ ಕನ್ನಡಿಗ)