ಮೂವರು ಖತರ್ನಾಕ್ ಖದೀಮರು ಪುತ್ತೂರು ಪೊಲೀಸರ ಬಲೆಗೆ: ಇವರಲ್ಲಿ ಸಿಕ್ಕಿದ್ದು 175 ಕೆ ಜಿ ಗಾಂಜಾ!
Tuesday, August 11, 2020
(ಗಲ್ಫ್ ಕನ್ನಡಿಗ)ಕೇರಳ ಮಂಜೇಶ್ವರದ ದೂರ್ಮಕ್ಕಾಡ್ ನ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು (26), ಕೇರಳ ಮಂಜೇಶ್ವರ ಹೊಸಂಗಡಿಯ ಮೊಹಮ್ಮದ್ ಶಫಿಕ್ (31), ದ.ಕ ಜಿಲ್ಲೆಯ ಬಂಟ್ವಾಳದ ಕನ್ಯಾನದ ಖಲಂದರ್ ಶಾಫಿ (26) ಬಂಧಿತರು.
(ಗಲ್ಫ್ ಕನ್ನಡಿಗ)ಇವರು ಕೇರಳ ನೊಂದಾಣಿಯ ಕಾರು ಮತ್ತು ಕರ್ನಾಟಕ ನೊಂದಾಣಿಯ ಪಿಕಪ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದರು. ಇವರ ವಾಹನದಲ್ಲಿ 17.5 ಲಕ್ಷ ಮೌಲ್ಯದ 175 ಕೆ ಜಿ ಗಾಂಜಾ ಸಿಕ್ಕಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ.
(ಗಲ್ಫ್ ಕನ್ನಡಿಗ)ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿಯಲ್ಲಿ ಈ ಖದೀಮರನ್ನು ಬಂಧಿಸಿ 17.5 ಲಕ್ಷ ಮೌಲ್ಯದ ಗಾಂಜಾ, 3 ಲಕ್ಷ ಮೌಲ್ಯದ ಪಿಕಪ್ ವಾಹನ, 4 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಂಡಿದ್ದಾರೆ.
(ಗಲ್ಫ್ ಕನ್ನಡಿಗ)ಆರೋಪಿಗಳ ಪೈಕಿ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು ಎಂಬಾತನ ವಿರುದ್ದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ಹಾಗೂ ಖಲಂದರ್ ಶಾಫಿ ಎಂಬಾತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ 2 ಅಕ್ರಮ ಗಾಂಜಾ ಪ್ರಕರಣ ಹಾಗು 1 ಕೊಲೆ ಯತ್ನ ಪ್ರಕರಣ ಮತ್ತು ಕಾವೂರು ಠಾಣೆಯಲ್ಲಿ 1 ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿರುತ್ತದೆ.
(ಗಲ್ಫ್ ಕನ್ನಡಿಗ)