ಕೊರೊನಾ ಶಾಕ್ ನಡುವೆ ಮಂಗಳೂರಿನಲ್ಲಿ ಸಿಕ್ಕಿತು ಗುಡ್ ನ್ಯೂಸ್! 2 ದಿನದಲ್ಲಿ ಸಾವಿರ ಮಂದಿ ಡಿಸ್ಚಾರ್ಜ್
(ಗಲ್ಪ್ ಕನ್ನಡಿಗ)ಮಂಗಳೂರು; ಪ್ರತಿನಿತ್ಯ ಮಂಗಳೂರು ಜನತೆಗೆ ಶಾಕ್ ನೀಡುತ್ತಿದ್ದ ಕೊರೊನಾ ನಿನ್ನೆ ಮ ಇಂದು ಗುಡ್ ನ್ಯೂಸ್ ನೀಡಿದೆ.
(ಗಲ್ಪ್ ಕನ್ನಡಿಗ)ಮಂಗಳೂರಿನಲ್ಲಿ ಕಳೆದ ಎರಡು ದಿನಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ.ನಿನ್ನೆ 533 ಮಂದಿ ಗುಣಮುಖರಾದರೆ ಇಂದು 519 ಮಂದಿ ಗುಣಮುಖರಾಗಿದ್ದಾರೆ.ಈ ಹಿಂದೆ ಪ್ರತಿದಿನ ದಾಖಲಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಗುಣಮುಖರಾಗುತ್ತಿದ್ದವರ ಸಂಖ್ಯೆ ಕಡಿಮೆ ಇರುತ್ತಿತ್ತು. ಆದರೆ ಕಳೆದ ಎರಡು ದಿನದಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಜಾಸ್ತಿಯಾಗಿದೆ.
(ಗಲ್ಪ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 7596 ಪ್ರಕರಣ ದಾಖಲಾಗಿದ್ದು ಇದರಲ್ಲಿ 4734 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಸಂಖ್ಯೆ 2625 ಇದ್ದು ಗುಣಮುಖರಾದವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ನೆಮ್ಮದಿ ತಂದಿದೆ.
(ಗಲ್ಪ್ ಕನ್ನಡಿಗ)ದಕ್ಷಿಣ ನ್ನಡ ಜಿಲ್ಲೆಯಲ್ಲಿ ಇಂದು 9 ಮಂದಿ ಸಾವನ್ನಪ್ಪಿದ್ದು ಇದರಲ್ಲಿ 8 ಮಂದಿ ಮಂಗಳೂರು ತಾಲೂಕಿನವರಾಗಿದ್ದು ಒಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಇಂದು 243 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದಲರಲ್ಇ ಮಂಗಳೂರು ತಾಲೂಕಿನ 189 , ಬಂಟ್ವಾಳ ತಾಲೂಕಿನ 30, ಪುತ್ತೂರು ತಾಲೂಕಿನ 6, ಸುಳ್ಯ ತಾಲೂಕಿನ 4, ಬೆಳ್ತಂಗಡಿ ತಾಲೂಕಿನ 10 ಮತ್ತು ಹೊರಜಿಲ್ಲೆಯ 4 ಮಂದಿಗೆ ದೃಢಪಟ್ಟಿದೆ.
(ಗಲ್ಪ್ ಕನ್ನಡಿಗ)