-->
ಉಡುಪಿಯಲ್ಲೊಬ್ಬಳು ಪಾಪಿ ತಾಯಿ; ಕಸದ ಬುಟ್ಟಿಯಲ್ಲಿ ಸಿಕ್ಕಿತು  ನವಜಾತ ಶಿಶು! (video)

ಉಡುಪಿಯಲ್ಲೊಬ್ಬಳು ಪಾಪಿ ತಾಯಿ; ಕಸದ ಬುಟ್ಟಿಯಲ್ಲಿ ಸಿಕ್ಕಿತು ನವಜಾತ ಶಿಶು! (video)



(ಗಲ್ಫ್ ಕನ್ನಡಿಗ)ಉಡುಪಿ; ಹೆತ್ತ ತಾಯಿ ತನ್ನ ಕಂದಮ್ಮನಿಗಾಗಿ ಜೀವವನ್ನೆ ಮೀಸಲಿಡುತ್ತಾಳೆ. ಕರುಣಾಮಯಿ ತಾಯಿ ಎಂಬ ಪದಕ್ಕೆ ಉಡುಪಿಯಲ್ಲೊಬ್ಬಳು ಮಸಿ ಬಳಿದಿದ್ದಾಳೆ.

(ಗಲ್ಫ್ ಕನ್ನಡಿಗ)ಒಂಬತ್ತು ತಿಂಗಳು ಹೊತ್ತು ಹೆರಿಗೆಯಾದ ಬೆನ್ನಿಗೆ ಮಗುವನ್ನು ಕಸದ ಬುಟ್ಟಿಗೆ ಎಸೆಯುವ ಕ್ರೂರತೆಯನ್ನು ಈಕೆ ಮಾಡಿದ್ದಾಳೆ.

(ಗಲ್ಫ್ ಕನ್ನಡಿಗ)ಹೌದು ,ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ನ ಕಸದ ಬುಟ್ಟಿಯಲ್ಲಿ ಇಂದು ಮಗುವೊಂದು ಪತ್ತೆಯಾಗಿದೆ.  ಜನನವಾಗಿ ಒಂದು ದಿನವು ಆಗದ ಈ ಮಗು ಕಸದ ಬುಟ್ಟಿಯಲ್ಲಿ ಇಟ್ಟು ಹೋಗಿದ್ದಾಳೆ ಪಾಪಿ ತಾಯಿ.

(ಗಲ್ಫ್ ಕನ್ನಡಿಗ) ಇಂದು  ಬೆಳಿಗ್ಗೆ ಕಸ ಕೊಂಡೊಯ್ಯಲು ಬಂದ ಪೌರಕಾರ್ಮಿಕರಿಗೆ  ಮಗುವಿನ ಅಳು ಕೇಳಿದೆ.  ಕಸದ ಬುಟ್ಟಿಯಲ್ಲಿ ನೋಡಿದಾಗ ನವಜಾತ ಶಿಸು ಇರುವುದನ್ನು ನೋಡಿದ್ದಾರೆ. ಕೂಡಲೇ ಪೌರ ಕಾರ್ಮಿಕರು  ಸ್ಥಳೀಯ ಹೋಟೆಲ್ ಮಾಲಕರಿಗೆ,  ಸಾರ್ವಜನಿಕರಿಗೆ ಈ ವಿಚಾರ ಗಮನಕ್ಕೆ ತಂದಿದ್ದಾರೆ.

(ಗಲ್ಫ್ ಕನ್ನಡಿಗ)ಉಡುಪಿಯಲ್ಲಿ ಸುರಿಯುತ್ತಿರುವ ಬಿರುಸಿನ ಮಳೆಯಲ್ಲಿ ಈ ಪಾಪಿ ತಾಯಿ ಮಗುವನ್ನು ಎಸೆದು ಹೋಗಿರುವುದು ಕರಳು ಚುರುಕ್ ಎನಿಸಿದೆ.


(ಗಲ್ಫ್ ಕನ್ನಡಿಗ)ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ  ನಿತ್ಯಾನಂದ ಒಳಕಾಡು ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಣೆ ಮಾಡಿ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. 

(ಗಲ್ಫ್ ಕನ್ನಡಿಗ)ಮಗು ಇಂದು ಜನಿಸಿದ್ದು ಮಗುವಿನ ಕರುಳಬಳ್ಳಿಯನ್ನು ಕೂಡ ಕತ್ತರಿಸಲಾಗಿಲ್ಲ. ಹೆಣ್ಣು ಮಗುವೆಂಬ ಕಾರಣಕ್ಕೋ, ಅಥವಾ ಅನೈತಿಕ ಸಂಬಂಧದಲ್ಲಿ ಹುಟ್ಟಿದ ಮಗುವೆಂಬ ಕಾರಣಕ್ಕೋ ನಿಷ್ಕರುಣಿ ತಾಯಿ ಈ ಪಾಪದ ಕೆಲಸ ಮಾಡಿದ್ದು ತಾಯಿ ಕೃತ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article