
ರಾಮಮಂದಿರ ಭೂಮಿ ಪೂಜೆಗೆ ಆಹ್ವಾನವಿದ್ದರೂ ತೆರಳದ ಖಾವಂದರು: ಧರ್ಮಸ್ಥಳದಿಂದಲೇ ಶುಭ ಹಾರೈಸಿದ ವೀರೇಂದ್ರ ಹೆಗ್ಗಡೆ ( video )
(ಗಲ್ಪ್ ಕನ್ನಡಿಗ) ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಆಹ್ವಾನವಿದ್ದರೂ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತೆರಳದೆ ಧರ್ಮಸ್ಥಳದಿಂದಲೇ ಶುಭಹಾರೈಸಿದ್ದಾರೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿರುವುದು ಭಾರತೀಯರೆಲ್ಲರಿಗೂ ಶುಭ ಸುದ್ದಿ . ಶ್ರೀರಾಮ ಭಗವಂತನ ಅವತಾರವೆಂದು ಭಾರತೀಯರ ನಂಬಿಕೆ,ಶ್ರದ್ಧೆ.ಆತ ಭೂಮಿಯಲ್ಲಿ ಅವತರಿಸಿದ ಬಳಿಕ ತನ್ನ ಸದ್ಗುಣಗಳಿಂದ ಆದರ್ಶಮೂರ್ತಿ ಎನಿಸಿದ.ಸಹಸ್ರಾರು ವರ್ಷಗಳಿಂದ ಮರ್ಯಾದ ಪುರುಷೋತ್ತಮನೆನಿಸಿ ತನ್ನ ವ್ಯಕ್ತಿತ್ವ,ದೃಢ ನಿರ್ಧಾರಗಳಿಂದಾಗಿ ಜನಮಾನಸದಲ್ಲಿ ನೆಲೆಯಾದ.ತನ್ನ ಆದರ್ಶಗಳಿಂದ ವಿಶ್ವವ್ಯಾಪಿಯಾದ. ಶ್ರೀರಾಮ ಸ್ಮರಣೆ ಇನ್ನೂ ಸಹಸ್ರ ವರ್ಷಗಳವರೆಗೆ ಈ ನೆಲದಲ್ಲಿ ಉಳಿಯಲಿ ಮತ್ತು ಬೆಳೆಯಲಿ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.