
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2109 ಮತ್ತು 2020 ರ ಗೌರವ ಪ್ರಶಸ್ತಿ ಪ್ರಕಟ
(ಗಲ್ಪ್ ಕನ್ನಡಿಗ)ಮಂಗಳೂರು:ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕೃತರನ್ನು ಘೋಷಣೆ ಮಾಡಿದೆ. ಮಂಗಳೂರಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ಪ್ರಶಸ್ತಿಯನ್ನು ಪ್ರಕಟಿಸಿದರು.
ಬ್ಯಾರಿ ಸಾಹಿತ್ಯ ಕ್ಷೇತ್ರ, ಬ್ಯಾರಿ ಕಲಾ ಕ್ಷೇತ್ರ ಹಾಗೂ ಬ್ಯಾರಿ ಸಂಘಟನೆ, ಸಮಾಜಸೇವೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಆರು ಮಂದಿ ಗಣ್ಯರನ್ನು ಅಕಾಡೆಮಿಯ 2019 ಮತ್ತು 2020ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಈ ಗೌರವ ಪ್ರಶಸ್ತಿಯು ರೂ.50,000-00 ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
(ಗಲ್ಪ್ ಕನ್ನಡಿಗ)ಗೌರವ ಪ್ರಶಸ್ತಿ - 2019 ರಲ್ಲಿ ಬ್ಯಾರಿ ಸಾಹಿತ್ಯ ಕ್ಷೇತ್ರ -ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬ್ಯಾರಿ ಕಲೆ ಕ್ಷೇತ್ರ-ಇಸ್ಮಾಯಿಲ್ ತಣ್ಣೀರುಬಾವಿ, ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ ಕ್ಷೇತ್ರ -ಎಮ್ ಅಹ್ಮದ್ ಬಾವಾ ಮೊಹಿದಿನ್ ಗೌರವ ಪ್ರಶಸ್ತಿ – 2020ರಲ್ಲಿ ಬ್ಯಾರಿ ಸಾಹಿತ್ಯ ಕ್ಷೇತ್ರ-ಬಶೀರ್ ಅಹ್ಮದ್ ಕಿನ್ಯ, ಬ್ಯಾರಿ ಸಿನಿಮಾ, ನಾಟಕ, ಕಲೆ ಕ್ಷೇತ್ರ-ವೀಣಾ ಮಂಗಳೂರು, ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ ಕ್ಷೇತ್ರ-ಸಿದ್ದೀಕ್ ಮಂಜೇಶ್ವರ ಆಯ್ಕೆಯಾಗಿದ್ದಾರೆ.
(ಗಲ್ಪ್ ಕನ್ನಡಿಗ)ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2019 ಮತ್ತು 2020ರ ಸಾಲಿನ ಗೌರವ ಪುರಸ್ಕಾರಕ್ಕೆ 2019 ನೇ ಸಾಲಿನಲ್ಲಿ ಬ್ಯಾರಿ ಶಿಕ್ಷಣ ಕ್ಷೇತ್ರ-ಅಬ್ದುಲ್ ರಝಾಕ್ ಅನಂತಾಡಿ, ಬ್ಯಾರಿ ಸಾಹಿತ್ಯ ಕ್ಷೇತ್ರ -ಟಿ.ಎಸ್. ಹುಸೈನ್, ಬ್ಯಾರಿ ಸಂಯುಕ್ತ ಕ್ಷೇತ್ರ-ಅಬ್ದುಲ್ ಮಜೀದ್ ಸೂರಲ್ಪಾಡಿ, ಸಮಾಜ ಸೇವೆ ಕ್ಷೇತ್ರ-ಆಪತ್ಬಾಂಧವ ಆಸಿಫ್ ಕಾರ್ನಾಡು, ಬ್ಯಾರಿ ಸಂಘಟನೆ ಕ್ಷೇತ್ರ-ಆಲಿಕುಂಞಿ ಪಾರೆ 2020 ರ ಸಾಲಿನಲ್ಲಿವೈದ್ಯಕೀಯ ಕ್ಷೇತ್ರ-ಡಾ| ಇಸ್ಮಾಯಿಲ್, ಬ್ಯಾರಿ ಶಿಕ್ಷಣ ಕ್ಷೇತ್ರ-ಟಿ.ಎ. ಮೊಹಮ್ಮದ್ ಆಸಿಫ್, ಸಮಾಜ ಸೇವೆ ಕ್ಷೇತ್ರ-ಇಲ್ಯಾಸ್ ಮಂಗಳೂರು, ಬ್ಯಾರಿ ಸಂಘಟನೆ ಕ್ಷೇತ್- ರಾಶ್ ಬ್ಯಾರಿ, ಬ್ಯಾರಿ ಯುವ ಪ್ರತಿಭೆ-ಸಫ್ವಾನ್ ಶಾ ಬಹರೈನ್ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮ, ಸದಸ್ಯ ಶಂಶೀರ್ ಬುಡೋಳಿ ಉಪಸ್ಥಿತರಿದ್ದರು
(ಗಲ್ಪ್ ಕನ್ನಡಿಗ)