ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 4 ಮಂದಿ ಸಾವು: 180 ಕ್ಕೇರಿದ ಸಾವಿನ ಸಂಖ್ಯೆ(ಗಲ್ಪ್ ಕನ್ನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೋವಿಡ್ ಗೆ ನಾಲ್ಕು ಮಂದಿ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿಒ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 180 ಕ್ಕೆ ಏರಿಕೆಯಾಗಿದೆ. ಇಂದು ನಾಲ್ವರು ಸಾವನ್ನಪ್ಪಿದವರು ಮಂಗಳೂರು ತಾಲೂಕಿವರಾಗಿದ್ದಾರೆ.


(ಗಲ್ಪ್ ಕನ್ನಡಿಗ)ಜಿಲ್ಲೆಯಲ್ಲಿ ಇಂದು 225 ಮಂದಿಗೆ ಕೊರೊನಾ ದೃಢಪಟ್ಟಿದ್ದು ಈವರೆಗೆ 6393 ಮಂದಿಗೆ ದೃಢಪಟ್ಟಿದೆ. ಇಂದು ಕೊರೊನಾ ದೃಢಪಟ್ಟ 225 ಮಂದಿಯಲ್ಲಿ 77 ಮಂದಿಯ ಕೊರೊನಾ ಸಂಪರ್ಕದ ಮೂಲವೆ ತಿಳಿದುಬಂದಿಲ್ಲ. ಉಳಿದಂತೆ 67 ಐಎಲ್ಐ, 20 ಸಾರಿ, 60 ಪ್ರಾಥಮಿಕ ಸಂಪರ್ಕ ಒಂದು ವಿದೇಶ ಪ್ರವಾಸದಿಂದ ಬಂದವರಿಗೆ ಕೊರೊನಾ ದೃಢಪಟ್ಟಿದೆ.


(ಗಲ್ಪ್ ಕನ್ನಡಿಗ)ಕೊರೊನಾ ದೃಢಪಟ್ಟ 225 ಪ್ರಕರಣಗಳಲ್ಲಿ ಇಂದು ಕೂಡ ಮಂಗಳೂರಿನದೆ ಸಿಂಹಪಾಲು ಇದೆ. 147 ಪ್ರಕರಣ ಮಂಗಳೂರು ತಾಲೂಕಿನದಾಗಿದ್ದು, 1 ಮೂಡಬಿದ್ರೆ, 19 ಬಂಟ್ವಾಳ, 29 ಬೆಳ್ತಂಗಡಿ, 16 ಪುತ್ತೂರು, 4 ಸುಳ್ಯ ತಾಲೂಕಿನದಾಗಿದ್ದು 9 ಮಂದಿ ಹೊರಜಿಲ್ಲೆಯವರಾಗಿದ್ದಾರೆ.


(ಗಲ್ಪ್ ಕನ್ನಡಿಗ)ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಈವರೆಗೆ 6393 ಪ್ರಕರಣ ದೃಢಪಟ್ಟರೆ, 2927( ಇಂದು 73) ಮಂದಿ ಗುಣಮುಖರಾಗಿದ್ದಾರೆ. 3061 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ