ಧ್ವಜಸ್ಥಂಭವಾದ ಹುಡುಗಿ; ವಿಟ್ಲ ಉಕ್ಕುಡ ದರ್ಬೆಯ ಮನೆಯಲ್ಲಿ ಮಕ್ಕಳ ವಿಶಿಷ್ಟ ಸ್ವಾತಂತ್ರ್ಯ ದಿನಾಚರಣೆ (Video)(ಗಲ್ಫ್ ಕನ್ನಡಿಗ)ಪ್ರತಿವರ್ಷವೂ ಸಂಭ್ರಮದ ಸ್ವಾತಂತ್ರ್ಯೋತ್ಸವ, ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಕಲರವ ಇದ್ದರೆ ಈ ವರ್ಷ ಕೊರೋನಾದಿಂದಾಗಿ ಮಕ್ಕಳು ಮನೆಯಲ್ಲೇ ಇರುವ ಪರಿಸ್ಥಿತಿ. ಇದರ ನಡುವೆಯೂ ವಿಟ್ಲ ಸಮೀಪದ ಉಕ್ಕುಡ ದರ್ಬೆ ಸಿರಾಜ್ ಮಂಝಿಲ್ ನ ವಠಾರದ ಮಕ್ಕಳು ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ಆಚರಿಸಿದ್ದು ಸಾಮಾಜಿಕ ತಾಣದಲ್ಲಿ ಮೆಚ್ಚುಗೆ ಪಡೆದಿದೆ.


(ಗಲ್ಫ್ ಕನ್ನಡಿಗ) ಉಕ್ಕುಡ ದರ್ಬೆಯ ಡಿ.ಎಂ. ರಶೀದ್ ಅವರ ಮನೆಯ ಅಂಗಳದಲ್ಲಿ ಹುಡುಗಿಯೊಬ್ಬಳು ಧ್ವಜ ಹಿಡಿದು ಧ್ವಜಸ್ಥಂಬವಾದಳು. ಪುಟ್ಟ ಪುಟ್ಟ ಮಕ್ಕಳು ಧ್ವಜವಂದನೆ ಮಾಡಿ ರಾಷ್ಟ್ರಗೀತೆ ಹಾಡಿದರು. ಹತ್ತಿರದ ವ್ಯಾಪಾರಿ ನವಾಝ್ ಮುಖ್ಯ ಅತಿಥಿಯಾದರು.


(ಗಲ್ಫ್ ಕನ್ನಡಿಗ) ಸಹೋದರರಾದ ಡಿ.ಎಂ.ರಶೀದ್, ಮುನೀರ್ ಹಾಗೂ ಮನ್ಸೂರ್ ಅವರ ಮಕ್ಕಳು ಝಂಡಾ ಊಂಚಾ ಹಾಡಿ ಧ್ವಜವಂದನೆ ನಡೆಸಿ ಜನಗಣಮನ ಪ್ರಾರ್ಥನೆ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆ ಪಡೆದಿದೆ. ಕೊರೋನಾ ಸಂದರ್ಭದಲ್ಲೂ ಮಕ್ಕಳ ದೇಶಪ್ರೇಮದ ಈ ಪರಿಕಲ್ಪನೆ ಉತ್ತಮವಾಗಿತ್ತು.