ನವೀನ್ ತಲೆ ತಂದರೆ 51 ಲಕ್ಷ ಕೊಡುವೆ ಎಂದ ರಿಜ್ವಿ ಪೊಲೀಸ್ ಬಲೆಗೆ


(ಗಲ್ಫ್ ಕನ್ನಡಿಗ)ಲಕ್ನೋ; ಫೇಸ್ ಬುಕ್ ನಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ಬೆಂಗಳೂರು ಗಲಭೆಗೆ ಕಾರಣನಾಗಿದ್ದ ನವೀನ್ ತಲೆ ಕಡಿದು ತಂದವರಿಗೆ 51  ಲಕ್ಷ ನೀಡುವೆ ಎಂದು ಹೇಳಿಕೆ ನೀಡಿದ  ಲಕ್ನೋದ ಸ್ಥಳೀಯ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ‌.

(ಗಲ್ಫ್ ಕನ್ನಡಿಗ)ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಳಿಯ ನವೀನ್ ಫೇಸ್‌ಬುಕ್‌ ನಲ್ಲಿ ಪ್ರವಾದಿಗಳ ಬಗ್ಗೆ ಅವಹೇಳನಕಾರಿ ಬರೆದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಇದೇ ಸಂದರ್ಭದಲ್ಲಿ  ಲಕ್ನೋದ ಶಹಜೀಬ್ ರಿಜ್ವಿಯು ವಿಡಿಯೊ ಮಾಡಿ ನವೀನ್ ತಲೆ ಕಡಿದು ತಂದುಕೊಟ್ಟವರಿಗೆ  51 ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದ.


(ಗಲ್ಫ್ ಕನ್ನಡಿಗ)ಮೀರತ್ ನ ಫಲ್ವಾಡ ದ ರಸೂಲ್ ಪುರ ಗ್ರಾಮದ ನಿವಾಸಿಯಾಗಿರುವ ಶಹಜೀಬ್ ರಿಜ್ವಿ ಯನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ. 

(ಗಲ್ಫ್ ಕನ್ನಡಿಗ)ಈತ ತಲೆ ತಂದು ಕೊಡುವವರಿಗೆ 51 ಲಕ್ಷ ನೀಡುವುದಾಗಿ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.