ಕುಡ್ಲ ಸಿಟಿಯಲ್ಲಿ ಹೆಬ್ಬಾವು ತಿರುಗಾಟ: ಬೆಚ್ಚಿ ಬಿದ್ದ ಜನ ಮಾಡಿದ್ದೇನು? ( video)
ಮಂಗಳೂರು: ಮಂಗಳೂರು ಮಹಾನಗರದಲ್ಲಿ ಅಪರೂಪದ ಅತಿಥಿ ಆಗಮನ ಜನರನ್ನು ಬೆಚ್ಚಿ ಬೀಳಿಸಿದೆ. ನಿನ್ನೆ ಸಂಜೆ ಯ ವೇಳೆಯಲ್ಲಿ ನಗರದ ಜಿ ಎಚ್ ಎಸ್ ರಸ್ತೆಯ ಶ್ರೀನಿವಾಸ ಹೋಟೆಲ್ ಸಮೀಪ ಹೆಬ್ಬಾವೊಂದು ಕಾಣಿಸಿಕೊಂಡಿದೆ. ನಗರದ ಮಧ್ಯೆ ಭಾಗಕ್ಕೆ ಬಂದ ಹಾವು ಗಲಿಬಿಲಿಗೊಂಡು ಅತ್ತಿಂದಿತ್ತ ಓಡಾಡುತ್ತಿದ್ದರೆ ನಗರದಲ್ಲಿ ಕಾಣಿಸಿಕೊಂಡ ಹೆಬ್ಬಾವು ಜನರನ್ನು ಭೀತಿಗೊಳಿಸಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೂಡಲೇ ಅಲ್ಲಿದ್ದವರು ಹಾವನ್ನು ಹಿಡಿಯುವ ವ್ಯವಸ್ಥೆ ಮಾಡಿದ್ದಾರೆ. ಹಾವು ಅತ್ತಿಂದಿತ್ತ ಚಲಿಸಿದರೆ ಕಷ್ಟ ಎಂದು ತರಕಾರಿ ಹಾಕುವ ಫೈಬರ್ ಬಾಕ್ಸ್ ನ್ನು ಹೆಬ್ಬಾವು ಮೇಲೆ ಹಾಕಿ ಅದು ಚಲಿಸದಂತೆ ನೋಡಿದ್ದಾರೆ. ಬಳಿಕ ಗೋಣಿಯನ್ನು ಪೈಪ್ ನ ಒಂದು ಬದಿಗೆ ಹಾಕಿ ಮತ್ತೊಂದು ಬದಿಯಿಂದ ಬಾಕ್ಸ್ ನೊಳಗಿದ್ದ ಹಾವು ಬರುವಂತೆ ಮಾಡಿದ್ದಾರೆ. ಪೈಪ್ ನೊಳಗೆ ಬಂದ ಹಾವು ನೇರಾ ಗೋಣಿಯೊಳಗೆ ಬಂದು ಬಿದ್ದಿದೆ. ಗೋಣಿಯೊಳಗೆ ಬಂಧಿಯಾದ ಅಪರೂಪದ ಹಾವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ