ಉಡುಪಿ ದೋಣಿ ದುರಂತ; ಸಮುದ್ರಪಾಲಾದ ನಾಲ್ವರ ಮೃತದೇಹ ಪತ್ತೆ


(ಗಲ್ಫ್ ಕನ್ನಡಿಗ)ಉಡುಪಿ; ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಡೆರಿಯಲ್ಲಿ ಸಮುದ್ರದಲ್ಲಿ ನಡೆದ ದೋಣಿ ದುರಂತದಲ್ಲಿ ನೀರುಪಾಲಾದ ನಾಲ್ವರ ಮೃತದೇಹ ಪತ್ತೆಯಾಗಿದೆ.

(ಗಲ್ಫ್ ಕನ್ನಡಿಗ)ನಿನ್ನೆ ದೋಣಿ ದುರಂತ ಸಂಭವಿಸಿದ್ದು ಇಂದು ಬೆಳಿಗ್ಗೆ ನಾಗ ಖಾರ್ವಿ ಅವರ ಮೃತದೇಹ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಅಳಿವೆ ಬಾಗಿಲಿನಿಂದ ದಕ್ಷಿಣ ಭಾಗದಲ್ಲಿ  ಸುಮಾರು ಒಂದೂವರೆ ಕಿ.ಮೀ ದೂರದ ನಾಗೂರಿನಲ್ಲಿ ಪತ್ತೆಯಾಗಿತ್ತು.

(ಗಲ್ಫ್ ಕನ್ನಡಿಗ)ರಾತ್ರಿ ವೇಳೆಗೆ ಲಕ್ಷ್ಮಣ ಖಾರ್ವಿ, ಶೇಖರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಅವರ ಮೃತದೇಹ ಪತ್ತೆಯಾಗಿದೆ. ದೋಣಿ ದುರಂತವಾದ ಸ್ಥಳದಿಂದ ದಕ್ಷಿಣ ಭಾಗದ 5 ಕಿ. ಮೀ ದೂರದ ಆದ್ರಗೋಳಿಯಲ್ಲಿ  ಲಕ್ಷ್ಮಣ ಖಾರ್ವಿ, ಅಲ್ಲಿಂದ ಒಂದು ಕಿ. ಮೀ ದೂರದಲ್ಲಿ  ಶೇಖರ ಖಾರ್ವಿ , ಗಂಗೇಬೈಲ್ ಬಳಿ ಮಂಜುನಾಥ ಖಾರ್ವಿ ಮೃತದೇಹ ಪತ್ತೆಯಾಗಿದೆ.

(ಗಲ್ಫ್ ಕನ್ನಡಿಗ)