shocking: ಒಂದೇ ಕುಟುಂಬದ 8 ಮಂದಿಯಿಂದ ವಿಷ ಸೇವನೆ
(ಗಲ್ಪ್ ಕನ್ನಡಿಗ)ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದ್ದು ಒಂದೇ ಕುಟುಂಬದ 8 ಮಂದಿ ವಿಷ ಸೇವನೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
(ಗಲ್ಪ್ ಕನ್ನಡಿಗ)ವಿಷ ಸೇವನೆ ಮಾಡಿದ ಎಂಟು ಮಂದಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಏಳು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೈಲಾ ಎಂಬ 53 ವರ್ಷದ ಮಹಿಳೆ ಸಾವನ್ನಪ್ಪಿದವರು. ಪ್ರೇಮಾ, ನಾರಾಯಣದ, ತಿಮ್ಮಮ್ಮ, ಉತ್ತರಪ್ಪ, ಕರಿಯಪ್ಪ, ಸಿದ್ದೇಶ್ ಮತ್ತು ಜಯಮ್ಮ ಅಸ್ವಸ್ಥಗೊಂಡವರು.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಆಸ್ತಿ ವಿಚಾರ ಸಂಬಂಧ ದಾಯಾದಿಗಳ ನಡುವೆ ನಡೆದ ಕಲಹವೆ ಘಟನೆ ಗೆ ಕಾರಣ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಏಳುಮಂದಿಯಲ್ಲಿ ಇಬ್ಬರು ಗಂಭೀರವಾಗಿದ್ದಾರೆ. ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಐದು ಮಂದಿ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಗಲ್ಪ್ ಕನ್ನಡಿಗ)