ಅಘಾತಕಾರಿ ಘಟನೆ-ಯಾರದ್ದೋ ಮಾತು ಕೇಳಿ ಬಾಲಕಿಗಾಗಿ ನಾಲಗೆ ಕತ್ತರಿಸಿದ ಮಹಿಳೆ!(ಗಲ್ಪ್ ಕನ್ನಡಿಗ)ರಾಂಚಿ: ಇದೊಂದು ಮೌಡ್ಯತೆಯ ಪರಮಾವಧಿ ಎಂದೆ ಹೇಳಬಹುದು. ಕಳೆದು ಹೋದ ಬಾಲಕಿಯ ಪತ್ತೆಗಾಗಿ ತನ್ನ ನಾಲಗೆಯನ್ನು ಮಹಿಳೆಯೊಬ್ಬರು ಕತ್ತರಿಸಿಕೊಂಡಿದ್ದಾರೆ.


(ಗಲ್ಪ್ ಕನ್ನಡಿಗ)ಈ ಅಘಾತಕಾರಿ ಘಟನೆ ನಡೆದದ್ದು ಜಾರ್ಖಂಡ್ ರಾಜ್ಯದ ಸೆರೈಕೇಲಾ - ಖಸ್ರ್ವಾನ್ ನ ಎನ್ ಐ ಟಿ ಎಂಬ ಕ್ಯಾಂಪಸ್ ಬಳಿ. ಲಕ್ಷ್ಮೀ ನಿರಾಲ ಎಂಬ ಮಹಿಳೆ ನಾಲಗೆ ಕತ್ತರಿಸಿಕೊಂಡವರು. ಇವರ ಸೊಸೆ ಜ್ಯೋತಿ ಎಂಬ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಕಳೆದು ಹೋಗಿರುವ ಸೊಸೆ ಮರಳಿ ಸಿಗಲೆಂದು ಈ ಮಹಿಳೆ ಹುಡುಕಾಡಿದ್ದು ಇವರಿಗೆ ಯಾರೋ ನಾಲಗೆ ಕತ್ತರಿಸುವ ಹರಕೆಯನ್ನು ಕೊಡುವಂತೆ ಹೇಳಿದ್ದಾರೆ. ಅದರಂತೆ ಸೊಸೆ ಸಿಗಲಂದು ಈ ಮಹಿಳೆ ತನ್ನ ನಾಲಗೆಯನ್ನು ಬ್ಲೇಡ್ ನಿಂದ ಕತ್ತರಿಸಿದ್ದಾಳೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ


(ಗಲ್ಪ್ ಕನ್ನಡಿಗ)ನಾಲಗೆ ಕತ್ತರಿಸಿಕೊಂಡ ಬಳಿಕ ನೋವಿದ್ದರೂ ಮಹಿಳೆ ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದಾಳೆ. ನಂತರ ಸ್ಥಳೀಯರು ಒತ್ತಾಯಪೂರ್ವಕವಾಗಿ ಮಹಿಳೆಯನ್ನು ಜೆಮ್ಸೆಡ್ ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.


(ಗಲ್ಪ್ ಕನ್ನಡಿಗ)ನಾಲಗೆ ಕತ್ತರಿಸಿಕೊಂಡ ಮಹಿಳೆಯ ಸೊಸೆ ಆಗಷ್ಟ್ 14 ರಂದು ಕಾಣೆಯಾಗಿದ್ದಳು. ನಂತರ ಈ ಮಹಿಳೆ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಮಹಿಳೆಗೆ ಯಾರೀ ನಾಲಗೆ ಕತ್ತರಿಸುವ ಹರಕೆ ನೀಡುವಂತೆ ಹೇಳಿದ್ದುಅದನ್ನು ನಂಬಿ ಮಹಿಳೆ ನಾಲಗೆಗೆ ಕತ್ತರಿ ಹಾಕಿದ್ದಾಳೆ.


(ಗಲ್ಪ್ ಕನ್ನಡಿಗ)