ಗೋಡೆ ಕುಸಿದು ಬಿದ್ದು ವೃದ್ಧೆ ಸಾವು.......

ಗೋಡೆ ಕುಸಿದು ಬಿದ್ದು ವೃದ್ಧೆ ಸಾವು.......

ತುಮಕೂರು
ಮಳೆ ಬರುತ್ತಿದ್ದ ವೇಳೆ ಕಾಂಪೌಂಡ್ ಬಳಿ ನಿಂತಿದ್ದ ವೃದ್ದೆಯೊಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.
 60 ವರ್ಷದ  ಚಿಕ್ಕಮ್ಮ ಎಂಬುವವರು ಮೃತಪಟ್ಟವರು.
ಗುಬ್ಬಿ  ತಾಲೂಕಿನ ಕಸಬಾ ಹೋಬಳಿಯ  ಮುದಿಗೆರೆಯಲ್ಲಿ  ಘಟನೆ ನಡೆದಿದೆ.  
ಅಲ್ಲದೆ ಈ ವೇಳೆ ವೃದ್ಧೆಯ ಬಳಿ ಇದ್ದ 3 ಕುರಿಗಳು ಅಸುನೀಗಿವೆ.  ಹಲೋಬ್ಲ್ಯಾಕ್ ನಿಂದ ನಿರ್ಮಿಸಿದ್ದ ಸುಮಾರು 15 ಅಡಿ ಎತ್ತರದ ಗೋಡೆಯು ಕುಸಿತು ಬಿದ್ದಿದೆ. ರಭಸವಾಗಿ ಬೀಸಿದ ಗಾಳಿ ಮಳೆಗೆ  ವೃದ್ಧೆ ಹಾಗೂ ಮೂರು ಮೇಕೆಗಳ ಮೇಲೆ ಹಾಲೋಬ್ಲ್ಯಾಕ್ ಗೋಡೆಯು ಬಿದ್ದಿದೆ ಎಂದು ಕಸಬಾ ಕಂದಾಯ ನಿರೀಕ್ಷಕ ರಮೇಶ್ ತಿಳಿಸಿದ್ದಾರೆ.